Base Word | |
כַּלָּה | |
Short Definition | a bride (as if perfect); hence, a son's wife |
Long Definition | bride, daughter-in-law |
Derivation | from H3634 |
International Phonetic Alphabet | kɑlˈlɔː |
IPA mod | kɑˈlɑː |
Syllable | kallâ |
Diction | kahl-LAW |
Diction Mod | ka-LA |
Usage | bride, daughter-in-law, spouse |
Part of speech | n-f |
Genesis 11:31
ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.
Genesis 38:11
ಆಗ ಯೆಹೂದನು ತನ್ನ ಸೊಸೆಯಾದ ತಾಮಾರ ಳಿಗೆ--ನನ್ನ ಮಗನಾದ ಶೇಲಹನು ದೊಡ್ಡವನಾಗುವ ವರೆಗೆ ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿ ಇರು ಅಂದನು. ಯಾಕಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳು ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.
Genesis 38:16
ಮಾರ್ಗ ದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು--ನನ್ನನ್ನು ನಿನ್ನ ಬಳಿಗೆ ಬರಗೊಡಿಸು ಅಂದನು. (ಯಾಕಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ). ಅವಳು--ನೀನು ನನ್ನ ಬಳಿಗೆ ಬಂದರೆ ನನಗೆ ಏನು ಕೊಡುವಿ ಅಂದಳು.
Genesis 38:24
ಹೆಚ್ಚುಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ--ನಿನ್ನ ಸೊಸೆಯಾದ ತಾಮಾರಳು ಜಾರತ್ವ ಮಾಡಿದ್ದಾಳೆ; ಜಾರತ್ವದಿಂದ ಗರ್ಭಿಣಿಯಾಗಿ ದ್ದಾಳೆ ಎಂದು ತಿಳಿಸಿದರು. ಆಗ ಯೆಹೂದನು--ಅವಳನ್ನು ಹೊರಗೆ ತನ್ನಿರಿ, ಅವಳು ಸುಡಲ್ಪಡಲಿ ಅಂದನು.
Leviticus 18:15
ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
Leviticus 20:12
ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು.
Ruth 1:6
ಆದರೆ ಕರ್ತನು ತನ್ನ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದನೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ತಿರಿಗಿ ಹೋಗುವದಕ್ಕೋಸ್ಕರ ಪ್ರಯಾಣವಾಗಿ ತಾನು ಇದ್ದ ಸ್ಥಳವನ್ನು ಬಿಟ್ಟು ಹೊರ ಟಳು.
Ruth 1:7
ಅವಳ ಇಬ್ಬರು ಸೊಸೆಯರು ಅವಳ ಸಂಗಡ ಹೊರಟು ಯೆಹೂದ ದೇಶಕ್ಕೆ ತಿರಿಗಿ ಹೋಗಬೇಕೆಂದು ಅವರು ಮಾರ್ಗದಲ್ಲಿ ನಡೆಯುವಾಗ
Ruth 1:8
ನೊವೊಮಿಯು ತನ್ನ ಇಬ್ಬರು ಸೊಸೆಯರಿಗೆ ನೀವು ಇಬ್ಬರೂ ನಿಮ್ಮ ನಿಮ್ಮ ತಾಯಿಯ ಮನೆಗೆ ತಿರಿಗಿಹೋಗಿರಿ; ನೀವು ಸತ್ತವರಿಗೂ ನನಗೂ ಮಾಡಿದ ಹಾಗೆಯೇ ಕರ್ತನು ನಿಮಗೆ ಕೃಪೆಯಿಂದ ಮಾಡಲಿ.
Ruth 1:22
ಹೀಗೆ ನೊವೊಮಿ ಮೋವಾಬ್ ದೇಶಸ್ಥಳಾದ ರೂತೆಂಬ ತನ್ನ ಸೊಸೆಯ ಸಂಗಡ ಮೋವಾಬ್ ದೇಶ ದಿಂದ ತಿರಿಗಿ ಬಂದಳು. ಇದಲ್ಲದೆ ಅವರು ಜವೆ ಗೋಧಿಯ ಸುಗ್ಗಿಯ ಕಾಲ ಪ್ರಾರಂಭಿಸಿದಾಗ ಬೇತ್ಲೆಹೇಮಿಗೆ ಬಂದರು.
Occurences : 34
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்