Psalm 45
1 ನನ್ನ ಹೃದಯವು ಒಂದು ದಿವ್ಯ ವಿಷಯವನ್ನು ರಚಿಸುತ್ತಿರುವದು; ಅರಸನನ್ನು ಕುರಿತು ನಾನು ಮಾಡಿದವುಗಳನ್ನು ವಿವರಿಸುತ್ತೇನೆ; ನನ್ನ ನಾಲಿಗೆಯು ಬರೆಯುವವನ ಲೇಖನಿಯಂತೆ ಸಿದ್ಧವಾಗಿದೆ.
2 ನೀನು ಮನುಷ್ಯರ ಮಕ್ಕಳಿಗಿಂತ ಅತಿ ಸುಂದರ ನಾಗಿದ್ದೀ; ನಿನ್ನ ತುಟಿಗಳಲ್ಲಿ ಕೃಪೆಯು ಹೊಯಿದದೆ; ಆದದರಿಂದ ದೇವರು ಎಂದೆಂದಿಗೂ ನಿನ್ನನ್ನು ಆಶೀ ರ್ವದಿಸಿದ್ದಾನೆ.
3 ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ.
4 ಸತ್ಯತೆ ಸಾತ್ವಿಕತೆ ನೀತಿಗೋಸ್ಕರವೂ ನಿನ್ನ ಘನತೆಯಿಂದ ಅಭಿವೃದ್ಧಿಹೊಂದಿ ಸವಾರಿಮಾಡು; ನಿನ್ನ ಬಲಗೈ ಭಯಂಕರವಾದವುಗಳನ್ನು ನಿನಗೆ ಕಲಿಸುವದು.
5 ನಿನ್ನ ಹದವಾದ ಬಾಣಗಳು ಅರಸನ ಶತ್ರು ಗಳ ಹೃದಯದಲ್ಲಿ ನೆಟ್ಟಿವೆ; ಅವುಗಳಿಂದ ಜನರು ನಿನ್ನ ಕೆಳಗೆ ಬೀಳುತ್ತಾರೆ
6 ಓ ದೇವರೇ, ನಿನ್ನ ಸಿಂಹಾಸ ನವು ಎಂದೆಂದಿಗೂ ಇರುವದು; ನಿನ್ನ ರಾಜ್ಯದಂಡವು ನ್ಯಾಯದಂಡವಾಗಿದೆ.
7 ನೀನು ನೀತಿಯನ್ನು ಪ್ರೀತಿ ಮಾಡುತ್ತೀ; ದುಷ್ಟತ್ವವನ್ನು ಹಗೆಮಾಡುತ್ತೀ; ಆದದ ರಿಂದ ದೇವರು, ನಿನ್ನ ದೇವರು, ನಿನ್ನ ಸಂಗಡಿಗರಿಗಿಂತ ಹೆಚ್ಚಾಗಿ ನಿನ್ನನ್ನು ಆನಂದ ತೈಲದಿಂದ ಅಭಿಷೇಕಿಸಿ ದ್ದಾನೆ.
8 ನಿನ್ನ ವಸ್ತ್ರಗಳೆಲ್ಲಾ ಬೋಳವು ಅಗರು ದಾಲ್ಚಿನ್ನಿ ಇವುಗಳ ಸುವಾಸನೆಯಿಂದ ಇರುತ್ತವೆ. ಇವುಗಳಿಂದ ಅವರು ದಂತದ ಅರಮನೆಗಳೊಳಗಿಂದ ನಿನ್ನನ್ನು ಸಂತೋಷಪಡಿಸುತ್ತಾರೆ.
9 ಅರಸುಗಳ ಕುಮಾರ್ತೆ ಯರು ನಿನ್ನ ಗೌರವವುಳ್ಳ ಸ್ತ್ರೀಯರಲ್ಲಿ ಇದ್ದಾರೆ; ರಾಣಿಯು ಓಫಿರ್ ಬಂಗಾರವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿದ್ದಾಳೆ.
10 ಓ ಮಗಳೇ, ಕಿವಿಗೊಟ್ಟು ಕೇಳಿ ಆಲೋಚಿಸು, ನಿನ್ನ ಸ್ವಂತ ಜನರನ್ನು ನಿನ್ನ ತಂದೆಯ ಮನೆಯನ್ನು ಮರೆತುಬಿಡು.
11 ಆಗ ಅರಸನು ನಿನ್ನ ಸೌಂದರ್ಯ ವನ್ನು ಬಹಳವಾಗಿ ಅಪೇಕ್ಷಿಸುವನು; ಆತನೇ ನಿನ್ನ ಕರ್ತನು; ಆತನನ್ನು ಆರಾಧಿಸು.
12 ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
13 ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ.
14 ಇವಳು ಕಸೂತಿ ವಸ್ತ್ರಗಳನ್ನುಟ್ಟು ಅರಸನ ಬಳಿಗೆ ತರಲ್ಪಡುತ್ತಾಳೆ; ಅವಳ ಹಿಂದೆ ಇರುವ ಕನ್ಯೆಯರಾದ ಅವಳ ಸಂಗಡಿಗರು ನಿನ್ನ ಬಳಿಗೆ ತರಲ್ಪಡುತ್ತಾರೆ.
15 ಸಂತೋಷದಿಂದಲೂ ಉಲ್ಲಾಸದಿಂದಲೂ ಅವರು ತರಲ್ಪಡುತ್ತಾರೆ; ಅವರು ಅರಸನ ಅರಮನೆಯೊಳಗೆ ಪ್ರವೇಶಿಸುವರು.
16 ನಿನ್ನ ತಂದೆಗಳಿಗೆ ಬದಲಾಗಿ ನಿನ್ನ ಮಕ್ಕಳು ಇರುವರು; ಅವರನ್ನು ಭೂಮಿಯ ಮೇಲೆಲ್ಲಾ ಪ್ರಧಾನರನ್ನಾಗಿ ಮಾಡುವಿ.
17 ತಲತಲಾಂತರಗಳ ಲ್ಲೆಲ್ಲಾ ನಿನ್ನ ಹೆಸರನ್ನು ನಾನು ಜ್ಞಾಪಕಪಡಿಸುವೆನು; ಆದದರಿಂದ ಜನರು ಯುಗಯುಗಾಂತರಗಳಿಗೂ ನಿನ್ನನ್ನು ಕೊಂಡಾಡುವರು.
1 To the chief Musician upon Shoshannim, for the sons of Korah, Maschil, A Song of loves.
2 My heart is inditing a good matter: I speak of the things which I have made touching the king: my tongue is the pen of a ready writer.
3 Thou art fairer than the children of men: grace is poured into thy lips: therefore God hath blessed thee for ever.
4 Gird thy sword upon thy thigh, O most mighty, with thy glory and thy majesty.
5 And in thy majesty ride prosperously because of truth and meekness and righteousness; and thy right hand shall teach thee terrible things.
6 Thine arrows are sharp in the heart of the king’s enemies; whereby the people fall under thee.
7 Thy throne, O God, is for ever and ever: the sceptre of thy kingdom is a right sceptre.
8 Thou lovest righteousness, and hatest wickedness: therefore God, thy God, hath anointed thee with the oil of gladness above thy fellows.
9 All thy garments smell of myrrh, and aloes, and cassia, out of the ivory palaces, whereby they have made thee glad.
10 Kings’ daughters were among thy honourable women: upon thy right hand did stand the queen in gold of Ophir.
11 Hearken, O daughter, and consider, and incline thine ear; forget also thine own people, and thy father’s house;
12 So shall the king greatly desire thy beauty: for he is thy Lord; and worship thou him.
13 And the daughter of Tyre shall be there with a gift; even the rich among the people shall intreat thy favour.
14 The king’s daughter is all glorious within: her clothing is of wrought gold.
15 She shall be brought unto the king in raiment of needlework: the virgins her companions that follow her shall be brought unto thee.
16 With gladness and rejoicing shall they be brought: they shall enter into the king’s palace.
17 Instead of thy fathers shall be thy children, whom thou mayest make princes in all the earth.
18 I will make thy name to be remembered in all generations: therefore shall the people praise thee for ever and ever.