Micah 2:10
ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು.
Micah 2:10 in Other Translations
King James Version (KJV)
Arise ye, and depart; for this is not your rest: because it is polluted, it shall destroy you, even with a sore destruction.
American Standard Version (ASV)
Arise ye, and depart; for this is not your resting-place; because of uncleanness that destroyeth, even with a grievous destruction.
Bible in Basic English (BBE)
Up! and go; for this is not your rest: because it has been made unclean, the destruction ordered will come on you.
Darby English Bible (DBY)
Arise ye, and depart; for this is not the resting-place, because of defilement that bringeth destruction, even a grievous destruction.
World English Bible (WEB)
Arise, and depart! For this is not your resting place, Because of uncleanness that destroys, Even with a grievous destruction.
Young's Literal Translation (YLT)
Rise and go, for this `is' not the rest, Because of uncleanness it doth corrupt, And corruption is powerful.
| Arise | ק֣וּמוּ | qûmû | KOO-moo |
| ye, and depart; | וּלְכ֔וּ | ûlĕkû | oo-leh-HOO |
| for | כִּ֥י | kî | kee |
| this | לֹא | lōʾ | loh |
| not is | זֹ֖את | zōt | zote |
| your rest: | הַמְּנוּחָ֑ה | hammĕnûḥâ | ha-meh-noo-HA |
| because | בַּעֲב֥וּר | baʿăbûr | ba-uh-VOOR |
| polluted, is it | טָמְאָ֛ה | ṭomʾâ | tome-AH |
| it shall destroy | תְּחַבֵּ֖ל | tĕḥabbēl | teh-ha-BALE |
| sore a with even you, | וְחֶ֥בֶל | wĕḥebel | veh-HEH-vel |
| destruction. | נִמְרָֽץ׃ | nimrāṣ | neem-RAHTS |
Cross Reference
Deuteronomy 12:9
ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ವಿಶ್ರಾಂತಿಗೂ ಸ್ವಾಸ್ತ್ಯಕ್ಕೂ ನೀವು ಇನ್ನೂ ಸೇರಲಿಲ್ಲ;
Psalm 106:38
ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.
Hebrews 4:1
ಹೀಗಿರಲಾಗಿ ಆತನ ವಿಶ್ರಾಂತಿಯಲ್ಲಿ ಸೇರುವೆವೆಂಬ ವಾಗ್ದಾನವು ಇನ್ನೂ ಇರು ವಲ್ಲಿ ನಿಮ್ಮೊಳಗೆ ಯಾವನಾದರೂ ಆದರಿಂದ ತಪ್ಪುವವನಾದಾನೋ ಎಂದು ನಾವು ಭಯಪಡೋಣ.
Ezekiel 36:12
ಹೌದು, ಮನುಷ್ಯರು ನಿಮ್ಮ ಮೇಲೆ ನಡೆಯುವಂತೆ ನಾನು ಮಾಡುವೆನು, ಅದು ನನ್ನ ಜನರಾದ ಇಸ್ರಾಯೇಲ್ಯರ ಮೇಲೆಯೇ; ಅವರು ನಿನ್ನನ್ನು ಸ್ವಾಧೀನಮಾಡಿಕೊಳ್ಳುವರು, ನೀನು ಅವರಿಗೆ ಸ್ವಾಸ್ಥ್ಯವಾಗುವಿ ಮತ್ತು ನೀನು ಇನ್ನು ಮೇಲೆ ಅವರನ್ನು ಮಕ್ಕಳಿಲ್ಲದ ಮನುಷ್ಯರನ್ನಾಗಿ ಮಾಡುವದಿಲ್ಲ.
Jeremiah 10:18
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಒಂದೇ ಸಾರಿ ದೇಶದ ನಿವಾಸಿಗಳನ್ನು ಕವಣಿಯಿಂದ ಎಸೆದು ಬಿಡುತ್ತೇನೆ; ಅವರಿಗೆ ತಗಲುವ ಹಾಗೆ ಅವರನ್ನು ಸಂಕಟಪಡಿಸುತ್ತೇನೆ.
Jeremiah 9:19
ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆಪಡುತ್ತೇವೆ ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿ ಬಂತು.
Jeremiah 3:2
ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆತ್ತುಕೊಂಡು ಎಲ್ಲಿ ನಿನ್ನ ಸಂಗಡ ಮಲಗಲಿಲ್ಲವೋ ನೋಡು. ಅರಣ್ಯದಲ್ಲಿ ಅರಬಿಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ; ಹೀಗೆ ನಿನ್ನ ಸೂಳೆತನಗಳಿಂದಲೂ ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀ.
Psalm 95:11
ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.
2 Chronicles 36:20
ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
2 Chronicles 7:20
ನಾನು ಅವರಿಗೆ ಕೊಟ್ಟ ನನ್ನ ದೇಶದೊಳಗಿಂದ ಅವರನ್ನು ನಿರ್ಮೂಲ ಮಾಡುವೆನು. ಇದಲ್ಲದೆ ನನ್ನ ಹೆಸರಿಗೋಸ್ಕರ ನಾನು ಪರಿಶುದ್ಧ ಮಾಡಿದ ಈ ಆಲ ಯವನ್ನು ನನ್ನ ಸಮ್ಮುಖದಿಂದ ತಳ್ಳಿ ಅದನ್ನು ಸಮಸ್ತ ಜನಗಳಲ್ಲಿ ಗಾದೆಯಾಗಿಯೂ ಹಾಸ್ಯವಾಗಿಯೂ ಮಾಡುವೆನು.
2 Kings 17:6
ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.
2 Kings 15:29
ಇಸ್ರಾಯೇಲಿನ ಅರಸನಾದ ಪೆಕಹನ ದಿವಸಗಳಲ್ಲಿ ಅಶ್ಶೂರದ ಅರಸ ನಾದ ತಿಗ್ಲತ್ಪಿಲೆಸೆರನು ಬಂದು ನೆಫ್ತಾಲಿಯ ದೇಶವಾದ ಇಯ್ಯೋನನ್ನೂ ಅಬೇಲ್ಬೆತ್ಮಾಕವನ್ನೂ ಯಾನೋಹ ವನ್ನೂ ಕೆದೆಷನ್ನೂ ಹಾಚೋರನ್ನೂ ಗಿಲ್ಯಾದನ್ನೂ ಗಲಿಲಾಯವನ್ನೂ ಹಿಡುಕೊಂಡು ಜನರನ್ನು ಸೆರೆಯಾಗಿ ಅಶ್ಯೂರಿಗೆ ಒಯ್ದನು.
1 Kings 9:7
ಅನ್ಯ ದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಾನು ಆಗ ಇಸ್ರಾಯೇಲಿಗೆ ಕೊಟ್ಟ ಭೂಮಿಯಲ್ಲಿಂದ ಅವ ರನ್ನು ಕಡಿದುಬಿಟ್ಟು ನನ್ನ ಹೆಸರಿಗೋಸ್ಕರ ಪರಿಶುದ್ಧ ಮಾಡಿದ ಈ ಮಂದಿರವನ್ನು ನನ್ನ ಎದುರಿನಿಂದ ತೆಗೆದು ಬಿಡುವೆನು.
Joshua 23:15
ಈಗ ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಒಳ್ಳೇ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ ಹಾಗೆಯೇ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನು ನೀವು ವಿಾರಿ, ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಕರ್ತನು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವನು.
Deuteronomy 30:18
ಖಂಡಿತ ವಾಗಿಯೂ ನಶಿಸುವಿರೆಂದೂ ನೀವು ಸೇರಿ ಸ್ವಾಧೀನ ಮಾಡಿಕೊಳ್ಳುವದಕ್ಕೆ ಯೊರ್ದನನ್ನು ದಾಟಿಹೋಗುವ ದೇಶದಲ್ಲಿ ನಿಮ್ಮ ದಿವಸಗಳು ಬಹಳವಾಗುವದಿಲ್ಲ ವೆಂದೂ ಈಹೊತ್ತು ನಿಮಗೆ ತಿಳಿಸುತ್ತೇನೆ.
Deuteronomy 4:26
ನಾನು ಈ ದಿನ ಆಕಾಶ ವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆದು ನಿಮಗೆ ಹೇಳುವ ದೇನಂದರೆ--ನೀವು ಯೊರ್ದನನ್ನು ದಾಟಿ ಸ್ವಾಧೀನ ಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ ಸಂಪೂರ್ಣ ವಾಗಿ ನಶಿಸುವಿರಿ.
Leviticus 20:22
ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ.
Leviticus 18:24
ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.