Base Word
מָטַר
Short Definitionrain
Long Definitionrain
Derivationfrom H4305
International Phonetic Alphabetmɔːˈt̪’ɑr
IPA modmɑːˈtɑʁ
Syllablemāṭar
Dictionmaw-TAHR
Diction Modma-TAHR
Usagerain
Part of speechn-m

ವಿಮೋಚನಕಾಂಡ 9:33
ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.

ವಿಮೋಚನಕಾಂಡ 9:34
ಆನೆಕಲ್ಲಿನ ಮಳೆಯೂ ಗುಡುಗುಗಳೂ ನಿಂತುಹೋದದ್ದನ್ನು ಫರೋಹನು ನೋಡಿ ಅವನು ಇನ್ನೂ ಪಾಪಮಾಡಿ ತನ್ನ ಸೇವಕರ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.

ಧರ್ಮೋಪದೇಶಕಾಂಡ 11:11
ಆದರೆ ನೀವು ಸ್ವಾಧೀನಮಾಡಿ ಕೊಳ್ಳುವದಕ್ಕೆ ಹೋಗುವ ದೇಶವು ಬೆಟ್ಟಗಳೂ ತಗ್ಗು ಗಳೂ ಉಳ್ಳ ದೇಶವೇ; ಅದು ಆಕಾಶದ ಮಳೆಯಿಂದ ನೀರು ಕುಡಿಯುತ್ತದೆ;

ಧರ್ಮೋಪದೇಶಕಾಂಡ 11:14
ನೀನು ನಿನ್ನ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೂಡಿಸುವ ಹಾಗೆ ನಿಮ್ಮ ಭೂಮಿಗೆ ಅದರ ತಕ್ಕ ಕಾಲದಲ್ಲಿ ಮಳೆಯನ್ನೂ ಮುಂಗಾರು ಹಿಂಗಾರುಗಳನ್ನೂ ಕೊಡುವೆನು.

ಧರ್ಮೋಪದೇಶಕಾಂಡ 11:17
ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ಮಳೆಯಾಗದಂತೆ ಮಾಡಿ ಭೂಮಿಯು ತನ್ನ ಬೆಳೆಯನ್ನು ಕೊಡದಂತೆ ಆಕಾಶವನ್ನು ಮುಚ್ಚಿಬಿಡದ ಹಾಗೆಯೂ ಕರ್ತನು ನಮಗೆ ಕೊಡುವ ಆ ಉತ್ತಮ ದೇಶದಲ್ಲಿಂದ ನೀವು ಬೇಗ ನಾಶವಾಗದ ಹಾಗೆಯೂ ಎಚ್ಚರಿಕೆ ತಂದುಕೊಳ್ಳಿರಿ.

ಧರ್ಮೋಪದೇಶಕಾಂಡ 28:12
ಕರ್ತನು ಆಕಾಶ ವೆಂಬ ತನ್ನ ಒಳ್ಳೆ ಉಗ್ರಾಣವನ್ನು ನಿನಗೆ ತೆರೆದು ನಿನ್ನ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು ನಿನ್ನ ಕೈಕೆಲಸವನ್ನೆಲ್ಲಾ ಆಶೀರ್ವದಿಸುವನು; ನೀನು ಸಾಲ ತಕ್ಕೊಳ್ಳದೆ ಬಹಳ ಜನಾಂಗಗಳಿಗೆ ಸಾಲ ಕೊಡುವಿ.

ಧರ್ಮೋಪದೇಶಕಾಂಡ 28:24
ಕರ್ತನು ನಿನ್ನ ದೇಶದ ಮಳೆಯನ್ನು ಹುಡಿಯೂ ಧೂಳೂ ಆಗುವಂತೆ ಮಾಡು ವನು; ನೀನು ನಾಶವಾಗುವ ವರೆಗೆ ಅದು ಆಕಾಶದಿಂದ ನಿನ್ನ ಮೇಲೆ ಇಳಿದು ಬರುವದು.

ಧರ್ಮೋಪದೇಶಕಾಂಡ 32:2
ನನ್ನ ಬೋಧನೆಯು ಮಳೆಯಂತೆ ಸುರಿಯುವದು; ನನ್ನ ಮಾತು ಮಂಜಿನಂತೆಯೂ ಹುಲ್ಲಿನ ಮೇಲೆ ಬೀಳುವ ತುಂತುರಿನ ಹಾಗೆಯೂ ಪಲ್ಯದ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವದು.

1 ಸಮುವೇಲನು 12:17
ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.

1 ಸಮುವೇಲನು 12:18
ಸಮುವೇಲನು ಕರ್ತನಿಗೆ ಮೊರೆ ಇಟ್ಟದ್ದರಿಂದ ಆ ದಿವಸದಲ್ಲೇ ಕರ್ತನು ಗುಡುಗನ್ನೂ ಮಳೆಯನ್ನೂ ಕಳುಹಿಸಿದನು. ಆಗ ಜನರೆಲ್ಲರು ಕರ್ತನಿಗೂ ಸಮು ವೇಲನಿಗೂ ಬಹಳವಾಗಿ ಭಯಪಟ್ಟರು.

Occurences : 38

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்