Base Word
יָתוֹם
Short Definitiona bereaved person
Long Definitionan orphan, fatherless
Derivationfrom an unused root meaning to be lonely
International Phonetic Alphabetjɔːˈt̪om
IPA modjɑːˈto̞wm
Syllableyātôm
Dictionyaw-TOME
Diction Modya-TOME
Usagefatherless (child), orphan
Part of speechn-m

ವಿಮೋಚನಕಾಂಡ 22:22
ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು.

ವಿಮೋಚನಕಾಂಡ 22:24
ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.

ಧರ್ಮೋಪದೇಶಕಾಂಡ 10:18
ಆತನು ತಂದೆ ಇಲ್ಲದವರಿಗೂ ವಿಧವೆ ಯರಿಗೂ ನ್ಯಾಯತೀರಿಸುತ್ತಾನೆ; ಪರದೇಶಿಯನ್ನು ಪ್ರೀತಿಮಾಡಿ ಅನ್ನ ವಸ್ತ್ರ ಕೊಡುತ್ತಾನೆ.

ಧರ್ಮೋಪದೇಶಕಾಂಡ 14:29
ಆಗ (ನಿನ್ನ ಸಂಗಡ ಪಾಲನ್ನೂ ಸ್ವಾಸ್ತ್ಯವನ್ನೂ ಹೊಂದದ) ಲೇವಿಯನೂ ನಿನ್ನ ಬಾಗಲು ಗಳಲ್ಲಿರುವ ಅನ್ಯದೇಶದವನೂ ದಿಕ್ಕಿಲ್ಲದವನೂ ವಿಧ ವೆಯೂ ಬಂದು ನಿನ್ನ ದೇವರಾದ ಕರ್ತನು ನಿನ್ನನ್ನು ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಆಶೀರ್ವದಿಸುವ ಹಾಗೆ ತಿಂದು ತೃಪ್ತರಾಗಲಿ.

ಧರ್ಮೋಪದೇಶಕಾಂಡ 16:11
ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.

ಧರ್ಮೋಪದೇಶಕಾಂಡ 16:14
ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.

ಧರ್ಮೋಪದೇಶಕಾಂಡ 24:17
ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ.

ಧರ್ಮೋಪದೇಶಕಾಂಡ 24:19
ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ ಅಲ್ಲಿ ಸಿವುಡನ್ನು ಮರೆತುಬಿಟ್ಟರೆ ಅದನ್ನು ತಕ್ಕೊಳ್ಳುವದಕ್ಕೆ ತಿರುಗಿಕೊಳ್ಳಬಾರದು; ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸುವ ಹಾಗೆ ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.

ಧರ್ಮೋಪದೇಶಕಾಂಡ 24:20
ನಿನ್ನ ಇಪ್ಪೆಗಳನ್ನು ಬಡಿದರೆ ಮಿಕ್ಕಿದ್ದನ್ನು ಆರಿಸ ಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧ ವೆಗೂ ಇರಲಿ.

ಧರ್ಮೋಪದೇಶಕಾಂಡ 24:21
ನಿನ್ನ ದ್ರಾಕ್ಷೇತೋಟದಲ್ಲಿ ಕೂಡಿ ಸಿದರೆ ಮಿಕ್ಕಿದ್ದನ್ನು ಆರಿಸಬೇಡ; ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.

Occurences : 42

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்