ಲೂಕನು 7:7
ಇಲ್ಲವೆ ನಾನೂ ನಿನ್ನ ಬಳಿಗೆ ಬರುವದಕ್ಕೆ ಯೋಗ್ಯನಲ್ಲವೆಂದು ಎಣಿಸಿಕೊಂಡಿದ್ದೇನೆ; ಆದರೆ ನೀನು ಒಂದು ಮಾತು ಹೇಳು, ಆಗ ನನ್ನ ಆಳು ಗುಣಹೊಂದುವನು;
ಅಪೊಸ್ತಲರ ಕೃತ್ಯಗ 15:38
ಆದರೆ ಪೌಲನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಿಂದ ತಮ್ಮನ್ನು ಬಿಟ್ಟು ಹೋದವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವದು ತಕ್ಕದ್ದಲ್ಲ ವೆಂದು ನೆನಸಿದನು.
ಅಪೊಸ್ತಲರ ಕೃತ್ಯಗ 28:22
ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು.
2 ಥೆಸಲೊನೀಕದವರಿಗೆ 1:11
ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ.
1 ತಿಮೊಥೆಯನಿಗೆ 5:17
ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.
ಇಬ್ರಿಯರಿಗೆ 3:3
ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವದರಿಂದ ಮೋಶೆಗಿಂತ ಈತನು (ಕ್ರಿಸ್ತ ಯೇಸು) ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸ ಲ್ಪಟ್ಟಿದ್ದಾನೆ.
ಇಬ್ರಿಯರಿಗೆ 10:29
ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
Occurences : 7
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்