ಲೂಕನು 1:47
ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ;
ಲೂಕನು 2:11
ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ.
ಯೋಹಾನನು 4:42
ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.
ಅಪೊಸ್ತಲರ ಕೃತ್ಯಗ 5:31
ಇಸ್ರಾಯೇಲ್ಯ ರಲ್ಲಿ ಮಾನಸಾಂತರ ಉಂಟುಮಾಡಿ ಪಾಪಗಳ ಪರಿಹಾರವನ್ನು ಕೊಡುವ ಹಾಗೆ ಆತನು ಪ್ರಭುವೂ ರಕ್ಷಕನೂ ಆಗಿರುವಂತೆ ದೇವರು ತನ್ನ ಬಲಗೈಯಿಂದ ಆತನನ್ನು ಉನ್ನತಕ್ಕೆ ಏರಿಸಿದ್ದಾನೆ.
ಅಪೊಸ್ತಲರ ಕೃತ್ಯಗ 13:23
ಇವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಯೇಸು ಎಂಬ ಒಬ್ಬ ರಕ್ಷಕನನ್ನು ಎಬ್ಬಿಸಿದ್ದಾನೆ.
ಎಫೆಸದವರಿಗೆ 5:23
ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ,
ಫಿಲಿಪ್ಪಿಯವರಿಗೆ 3:20
ನಾವಾದರೊ ಪರಲೋಕ ನಿವಾಸಿಗಳು; ಅಲ್ಲಿಂದಲೇ ರಕ್ಷಕನು ಬರುವದನ್ನು ಎದುರು ನೋಡುತ್ತಾ ಇದ್ದೇವೆ; ಆತನೇ ಕರ್ತನಾದ ಯೇಸು ಕ್ರಿಸ್ತನು.
1 ತಿಮೊಥೆಯನಿಗೆ 1:1
ನಮ್ಮ ರಕ್ಷಕನಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕರ್ತನಾದ ಯೇಸು ಕ್ರಿಸ್ತನ ಆಜ್ಞಾನುಸಾರ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು
1 ತಿಮೊಥೆಯನಿಗೆ 2:3
ಯಾಕಂದರೆ ಇದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಒಳ್ಳೇದಾಗಿಯೂ ಅಂಗೀಕರಿಸತಕ್ಕದ್ದಾಗಿಯೂ ಅದೆ.
1 ತಿಮೊಥೆಯನಿಗೆ 4:10
ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
Occurences : 24
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்