Base Word
ὅλος
Short Definition"whole" or "all", i.e., complete (in extent, amount, time or degree), especially (neuter) as noun or adverb
Long Definitionall, whole, completely
Derivationa primary word
Same as
International Phonetic Alphabetˈho.los
IPA modˈow.lows
Syllableholos
DictionHOH-lose
Diction ModOH-lose
Usageall, altogether, every whit, + throughout, whole

ಮತ್ತಾಯನು 1:22
ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು.

ಮತ್ತಾಯನು 4:23
ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.

ಮತ್ತಾಯನು 4:24
ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು. ಆತನು ಅವರನ್ನು ಸ್ವಸ್ಥಪಡಿಸಿದನು.

ಮತ್ತಾಯನು 5:29
ಆದದರಿಂದ ನಿನ್ನ ಬಲಗಣ್ಣು ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಿತ್ತು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.

ಮತ್ತಾಯನು 5:30
ನಿನ್ನ ಬಲಗೈ ನಿನಗೆ ಅಭ್ಯಂತರವಾಗಿದ್ದರೆ ಅದನ್ನು ಕಡಿದು ನಿನ್ನಿಂದ ಬಿಸಾಡಿಬಿಡು; ಯಾಕಂದರೆ ನಿನ್ನ ಇಡೀ ಶರೀರವು ನರಕದಲ್ಲಿ ಹಾಕಲ್ಪಡುವದಕ್ಕಿಂತ ನಿನ್ನ ಅಂಗಗಳಲ್ಲಿ ಒಂದು ನಾಶವಾಗುವದು ನಿನಗೆ ಲಾಭಕರವಾಗಿದೆ.

ಮತ್ತಾಯನು 6:22
ಕಣ್ಣು ಶರೀರದ ದೀಪವಾಗಿದೆ. ಆದಕಾರಣ ನಿನ್ನ ಕಣ್ಣು ಶುದ್ಧವಾಗಿದ್ದರೆ ನಿನ್ನ ಶರೀರವೆಲ್ಲಾ ಬೆಳಕಾಗಿರುವದು.

ಮತ್ತಾಯನು 6:23
ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ಶರೀರವೆಲ್ಲಾ ಕತ್ತಲಾಗಿರುವದು. ಆದದರಿಂದ ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವದಾದರೆ ಆ ಕತ್ತಲು ಎಷ್ಟೋ ಅಧಿಕವಾದದ್ದಾಗಿರುವದು.

ಮತ್ತಾಯನು 9:26
ಇದರ ಕೀರ್ತಿಯು ಆ ದೇಶದಲ್ಲೆಲ್ಲಾ ಹರಡಿತು.

ಮತ್ತಾಯನು 9:31
ಆದರೆ ಅವರು ಹೊರಟುಹೋಗಿ ಆ ಸೀಮೆಯಲ್ಲೆಲ್ಲಾ ಆತನ ಕೀರ್ತಿಯನ್ನು ಹಬ್ಬಿಸಿದರು.

ಮತ್ತಾಯನು 13:33
ಆತನು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದ್ದೇನಂದರೆ--ಒಬ್ಬ ಸ್ತ್ರೀಯು ಹುಳಿಯನ್ನು ತಕ್ಕೊಂಡು ಮೂರು ಸೇರು ಹಿಟ್ಟೆಲ್ಲಾ ಹುಳಿಯಾಗುವ ತನಕ ಅದರಲ್ಲಿ ಅಡಗಿಸಿಟ್ಟ ಹುಳಿಗೆ ಪರಲೋಕ ರಾಜ್ಯವು ಹೋಲಿಕೆಯಾಗಿದೆ.

Occurences : 112

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்