ಮತ್ತಾಯನು 2:6
ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು.
ಲೂಕನು 22:26
ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿದೊಡ್ಡವನಾಗಿರು ವವನು ಚಿಕ್ಕವನಂತೆ ಇರಲಿ; ಮುಖ್ಯಸ್ಥನಾಗಿರುವವನು ಸೇವೆ ಮಾಡುವವನಂತೆ ಇರಲಿ.
ಅಪೊಸ್ತಲರ ಕೃತ್ಯಗ 7:10
ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.
ಅಪೊಸ್ತಲರ ಕೃತ್ಯಗ 14:12
ಅವರು ಬಾರ್ನಬನನ್ನು ೃಹಸ್ಪತಿ ಎಂದೂ ಪೌಲನು ಮುಖ್ಯ ಪ್ರಸಂಗಿಯಾಗಿದ್ದರಿಂದ ಬುಧನೆಂದೂ ಕರೆದರು;
ಅಪೊಸ್ತಲರ ಕೃತ್ಯಗ 15:22
ಆಗ ಅಪೋಸ್ತಲರೂ ಹಿರಿಯರೂ ಸರ್ವಸಭೆಯ ಸಮ್ಮತಿಯಿಂದ ತಮ್ಮಲ್ಲಿ ಕೆಲವರನ್ನು ಆರಿಸಿಕೊಂಡು ಪೌಲ ಬಾರ್ನಬರ ಜೊತೆಯಲ್ಲಿ ಅಂತಿಯೋಕ್ಯಕ್ಕೆ ಕಳುಹಿಸುವದು ಯುಕ್ತವೆಂದು ತೀರ್ಮಾನಿಸಿದರು. ಆದಕಾರಣ ಸಹೋದರರಲ್ಲಿ ಮುಖ್ಯಸ್ಥರಾಗಿದ್ದ ಬಾರ್ಸ ಬ್ಬನೆನಿಸಿಕೊಳ್ಳುವ ಯೂದನನ್ನೂ ಸೀಲನನ್ನೂ ಆರಿಸಿ ಕೊಂ
ಅಪೊಸ್ತಲರ ಕೃತ್ಯಗ 26:2
ಅರಸನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸಿದ ಎಲ್ಲಾ ಅಪರಾಧಗಳ ವಿಷಯವಾಗಿ ಈ ದಿವಸ ನಿನ್ನ ಮುಂದೆ ನನ್ನ ಪಕ್ಷದಲ್ಲಿ ಪ್ರತಿವಾದ ಮಾಡುವದಕ್ಕಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.
2 ಕೊರಿಂಥದವರಿಗೆ 9:5
ಹೀಗಿರಲಾಗಿ ನೀವು ಕೊಡುತ್ತೇವೆಂದು ಮೊದಲು ಹೇಳಿದ ಔದಾರ್ಯ ದ್ರವ್ಯವನ್ನು ಸಿದ್ಧಪಡಿಸಬೇಕೆಂದು ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಅವರನ್ನು ಪ್ರೋತ್ಸಾಹಿಸುವದು ಅವಶ್ಯವೆಂದು ನನಗೆ ತೋಚಿತು, ಹೀಗೆ ಅದು ಸಂಕೋಚದಿಂದ ಬಾರದೆ ಔದಾರ್ಯವಾಗಿಯೇ ಸಿದ್ಧವಾಗುವದು.
ಫಿಲಿಪ್ಪಿಯವರಿಗೆ 2:3
ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
ಫಿಲಿಪ್ಪಿಯವರಿಗೆ 2:6
ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
ಫಿಲಿಪ್ಪಿಯವರಿಗೆ 2:25
ಆದಾಗ್ಯೂ ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ ನನ್ನ ಸಹೋದರನೂ ಜೊತೆ ಕೆಲಸದವನೂ ಸಹ ಭಟನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನಾನು ನೆನಸಿದ್ದೇನೆ.
Occurences : 28
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்