1 ಕೊರಿಂಥದವರಿಗೆ 5:10
ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲು ಕೊಳ್ಳುವವರು, ವಿಗ್ರಹಾರಾಧಕರು ಇವರನ್ನು ಬಿಟ್ಟು ಬಿಡಬೇಕೆಂದು ನನ್ನ ತಾತ್ವರ್ಯವಲ್ಲ; ಹಾಗೆ ಬಿಡ ಬೇಕಾದರೆ ನೀವು ಈ ಲೋಕವನ್ನೇ ಬಿಟ್ಟು ಹೋಗ ಬೇಕಾಗುವದು.
1 ಕೊರಿಂಥದವರಿಗೆ 5:11
ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ.
1 ಕೊರಿಂಥದವರಿಗೆ 6:9
ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ; ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು
1 ಕೊರಿಂಥದವರಿಗೆ 10:7
ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ.
ಎಫೆಸದವರಿಗೆ 5:5
ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
ಪ್ರಕಟನೆ 21:8
ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
ಪ್ರಕಟನೆ 22:15
ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
Occurences : 7
எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்