ಕೀರ್ತನೆಗಳು 68:25
ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.
The singers | קִדְּמ֣וּ | qiddĕmû | kee-deh-MOO |
went before, | שָׁ֭רִים | šārîm | SHA-reem |
the players on instruments | אַחַ֣ר | ʾaḥar | ah-HAHR |
after; followed | נֹגְנִ֑ים | nōgĕnîm | noh-ɡeh-NEEM |
among | בְּת֥וֹךְ | bĕtôk | beh-TOKE |
them were the damsels | עֲ֝לָמ֗וֹת | ʿălāmôt | UH-la-MOTE |
playing with timbrels. | תּוֹפֵפֽוֹת׃ | tôpēpôt | toh-fay-FOTE |
Cross Reference
ನ್ಯಾಯಸ್ಥಾಪಕರು 11:34
ಯೆಪ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಬರುವಾಗ ಇಗೋ, ಅವನ ಮಗಳು ದಮ್ಮಡಿಗಳ ಸಂಗಡವೂ ನಾಟ್ಯದ ಸಂಗಡವೂ ಅವನನ್ನು ಎದುರು ಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು; ಅವಳ ಹೊರತಾಗಿ ಅವನಿಗೆ ಮಗನಾಗಲಿ ಮಗಳಾಗಲಿ ಇರಲಿಲ್ಲ.
ವಿಮೋಚನಕಾಂಡ 15:20
ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.
1 ಪೂರ್ವಕಾಲವೃತ್ತಾ 13:8
ಆಗ ದಾವೀದನೂ ಸಮಸ್ತ ಇಸ್ರಾ ಯೇಲ್ಯರೂ ತಮ್ಮ ಸಮಸ್ತ ಕಿನ್ನರಿ ವೀಣೆ ದಮ್ಮಡಿ ತಾಳ ತುತೂರಿಗಳಿಂದ ಬಲದಿಂದ ದೇವರ ಮುಂದೆ ಹಾಡುಗಳನ್ನೂ ಹಾಡಿದರು.
ಪ್ರಕಟನೆ 15:2
ಬೆಂಕಿ ಬೆರೆತ ಒಂದು ಗಾಜಿನ ಸಮುದ್ರವೋ ಎಂಬಂತೆ ನನಗೆ ಕಾಣಿಸಿತು; ಆಗ ಮೃಗದ ಮೇಲೆಯೂ ಅದರ ವಿಗ್ರಹದ ಮೇಲೆಯೂ ಅದರ ಮುದ್ರೆಯ ಮೇಲೆಯೂ ಅದರ ಹೆಸರಿನ ಅಂಕೆಯ ಮೇಲೆಯೂ ಜಯ ಹೊಂದಿದವರು ದೇವರ ವೀಣೆಗಳನ್ನು ಹಿಡು ಕೊಂಡು ಗಾಜಿನ ಸಮುದ್ರದ ಮೇಲೆ ನಿಂತಿರುವದನು
ಪ್ರಕಟನೆ 14:2
ಇದಲ್ಲದೆ ಪರಲೋಕದ ಕಡೆಯಿಂದ ಬಹಳ ನೀರುಗಳಂತೆಯೂ ಮಹಾಗುಡುಗಿನಂತೆಯೂ ಇದ್ದ ಶಬ್ದವನ್ನು ನಾನು ಕೇಳಿದೆನು. ತಮ್ಮ ವೀಣೆಗಳನ್ನು ಬಾರಿಸುತ್ತಿದ್ದ ವೀಣೆಗಾರರ ಸ್ವರವನ್ನೂ ನಾನು ಕೇಳಿದೆನು.
ಯೆರೆಮಿಯ 31:13
ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು.
ಯೆರೆಮಿಯ 31:4
ಇಸ್ರಾ ಯೇಲಿನ ಕನ್ಯಾಸ್ತ್ರೀಯೇ, ನೀನು ಕಟ್ಟಲ್ಪಟ್ಟಿರುವ ಹಾಗೆ ತಿರುಗಿ ನಿನ್ನನ್ನು ಕಟ್ಟುವೆನು; ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷಪಡು ವವರ ನಾಟ್ಯದಲ್ಲಿ ಹೊರಡುವಿ.
ಕೀರ್ತನೆಗಳು 150:3
ತುತೂರಿಯ ಶಬ್ದ ದಿಂದ ಆತನನ್ನು ಸ್ತುತಿಸಿರಿ. ವೀಣೆಯಿಂದಲೂ ಕಿನ್ನರಿಯಿಂದಲೂ ಆತನನ್ನು ಸ್ತುತಿಸಿರಿ.
ಕೀರ್ತನೆಗಳು 148:12
ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ಮುದುಕರೇ,
ಕೀರ್ತನೆಗಳು 87:7
ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.
1 ಸಮುವೇಲನು 18:6
ಆದರೆ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಜನರ ಸಹಿತವಾಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಸಂತೋಷದಿಂದ ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.