Psalm 46:3
ಅದರ ನೀರುಗಳು ಘೋಷಿಸಿ ಕದಲಿದರೂ ಅದರ ಉಬ್ಬರದಿಂದ ಬೆಟ್ಟಗಳು ಅಲ್ಲಾಡಿದರೂ ನಾವು ಭಯಪಡೆವು. ಸೆಲಾ.
Psalm 46:3 in Other Translations
King James Version (KJV)
Though the waters thereof roar and be troubled, though the mountains shake with the swelling thereof. Selah.
American Standard Version (ASV)
Though the waters thereof roar and be troubled, Though the mountains tremble with the swelling thereof. Selah
Bible in Basic English (BBE)
Though its waters are sounding and troubled, and though the mountains are shaking with their violent motion. (Selah.)
Darby English Bible (DBY)
Though the waters thereof roar [and] foam, though the mountains shake with the swelling thereof. Selah.
Webster's Bible (WBT)
Therefore will we not fear, though the earth shall be removed, and though the mountains shall be carried into the midst of the sea;
World English Bible (WEB)
Though the waters of it roar and are troubled, Though the mountains tremble with their swelling. Selah.
Young's Literal Translation (YLT)
Roar -- troubled are its waters, Mountains they shake in its pride. Selah.
| Though the waters | יֶהֱמ֣וּ | yehĕmû | yeh-hay-MOO |
| thereof roar | יֶחְמְר֣וּ | yeḥmĕrû | yek-meh-ROO |
| and be troubled, | מֵימָ֑יו | mêmāyw | may-MAV |
| mountains the though | יִ֥רְעֲשֽׁוּ | yirʿăšû | YEER-uh-shoo |
| shake | הָרִ֖ים | hārîm | ha-REEM |
| with the swelling | בְּגַאֲוָת֣וֹ | bĕgaʾăwātô | beh-ɡa-uh-va-TOH |
| thereof. Selah. | סֶֽלָה׃ | selâ | SEH-la |
Cross Reference
ಯೆರೆಮಿಯ 5:22
ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು.
ಕೀರ್ತನೆಗಳು 93:3
ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.
ಯೆಶಾಯ 17:12
ಸಮುದ್ರವು ಭೋರ್ಗರೆಯುವಂತೆ ಭೋರ್ಗರೆ ಯುವ ಬಹು ಜನಗಳ ಸಮೂಹಕ್ಕೆ ಅಯ್ಯೋ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಾಂಗಗಳಿಗೆ ಅಯ್ಯೋ!
ಪ್ರಕಟನೆ 16:20
ಆಗ ದ್ವೀಪಗಳೆಲ್ಲಾ ಓಡಿಹೋದವು; ಬೆಟ್ಟಗಳು ಸಿಕ್ಕದೆ ಹೋದವು.
ಮತ್ತಾಯನು 7:25
ಮಳೆಯು ಸುರಿದು ಪ್ರವಾಹಗಳು ಬಂದು ಗಾಳಿಯು ಬೀಸಿ ಆ ಮನೆಗೆ ಬಡಿದವು; ಆದರೂ ಅದು ಬೀಳಲಿಲ್ಲ; ಯಾಕಂದರೆ ಅದರ ಅಸ್ತಿವಾರವು ಬಂಡೆಯ ಮೇಲೆ ಹಾಕಲ್ಪಟ್ಟಿತು.
ನಹೂಮ 1:5
ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.
ಮಿಕ 1:4
ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
ಯೆರೆಮಿಯ 4:24
ಬೆಟ್ಟಗಳನ್ನು ನೋಡಿದೆನು, ಇಗೋ, ಅವು ನಡುಗಿದವು; ಗುಡ್ಡಗಳು ಹೌರವಾಗಿ ಅದುರಿದವು.
ಯೆಶಾಯ 5:3
ಓ ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷೆಯ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ.
ಕೀರ್ತನೆಗಳು 114:4
ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು.
ಕೀರ್ತನೆಗಳು 18:4
ಮರಣದ ದುಃಖಗಳು ನನ್ನನ್ನು ಆವರಿಸಿಕೊಂಡವು, ಭಕ್ತಿಹೀನರ ಪ್ರವಾಹಗಳು ನನ್ನನ್ನು ಹೆದರಿಸಿದವು.
ಯೋಬನು 38:11
ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು.
ಯೋಬನು 9:5
ಪರ್ವತಗಳನ್ನು ಅವು ಗಳಿಗೆ ತಿಳಿಯದ ಹಾಗೆ ನೂಕುತ್ತಾನೆ; ತನ್ನ ಸಿಟ್ಟಿನಲ್ಲಿ ಅವುಗಳನ್ನು ತಿರುಗಿಸುತ್ತಾನೆ.
1 ಅರಸುಗಳು 19:11
ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.
ನ್ಯಾಯಸ್ಥಾಪಕರು 5:4
ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
ಪ್ರಕಟನೆ 17:15
ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ.