Luke 1:9
ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.
Luke 1:9 in Other Translations
King James Version (KJV)
According to the custom of the priest's office, his lot was to burn incense when he went into the temple of the Lord.
American Standard Version (ASV)
according to the custom of the priest's office, his lot was to enter into the temple of the Lord and burn incense.
Bible in Basic English (BBE)
And as was the way of the priests, he had to go into the Temple to see to the burning of perfumes.
Darby English Bible (DBY)
it fell to him by lot, according to the custom of the priesthood, to enter into the temple of the Lord to burn incense.
World English Bible (WEB)
according to the custom of the priest's office, his lot was to enter into the temple of the Lord and burn incense.
Young's Literal Translation (YLT)
according to the custom of the priesthood, his lot was to make perfume, having gone into the sanctuary of the Lord,
| According to | κατὰ | kata | ka-TA |
| the | τὸ | to | toh |
| custom | ἔθος | ethos | A-those |
| priest's the of | τῆς | tēs | tase |
| office, | ἱερατείας | hierateias | ee-ay-ra-TEE-as |
| his lot was | ἔλαχεν | elachen | A-la-hane |
| τοῦ | tou | too | |
| incense burn to | θυμιᾶσαι | thymiasai | thyoo-mee-AH-say |
| when he went | εἰσελθὼν | eiselthōn | ees-ale-THONE |
| into | εἰς | eis | ees |
| the | τὸν | ton | tone |
| temple | ναὸν | naon | na-ONE |
| of the | τοῦ | tou | too |
| Lord. | κυρίου | kyriou | kyoo-REE-oo |
Cross Reference
ವಿಮೋಚನಕಾಂಡ 30:7
ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು.
1 ಪೂರ್ವಕಾಲವೃತ್ತಾ 23:13
ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು.
2 ಪೂರ್ವಕಾಲವೃತ್ತಾ 29:11
ನನ್ನ ಮಕ್ಕಳೇ, ಉದಾಸೀನರಾಗಿರಬೇಡಿರಿ; ಯಾಕಂದರೆ ತನ್ನ ಸಮ್ಮುಖದಲ್ಲಿ ನಿಲ್ಲುವದಕ್ಕೂ ತನ್ನನ್ನು ಸೇವಿಸುವದಕ್ಕೂ ಸೇವಕರಾಗಿರುವದಕ್ಕೂ ಧೂಪಸುಡುವದಕ್ಕೂ ಕರ್ತನು ನಿಮ್ಮನ್ನು ಆದುಕೊಂಡಿದ್ದಾನೆ ಅಂದನು.
1 ಸಮುವೇಲನು 2:28
ನನ್ನ ಯಜ್ಞ ವೇದಿಯ ಮೇಲೆ ಬಲಿಯನ್ನು ಅರ್ಪಿಸುವದಕ್ಕೂ ಧೂಪವನ್ನು ಸುಡುವದಕ್ಕೂ ನನ್ನ ಮುಂದೆ ಏಫೋ ದನ್ನು ಧರಿಸಿಕೊಂಡಿರುವದಕ್ಕೂ ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರ ಬೇಕೆಂದು ನಾನು ಅವನನ್ನು ಆದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲ್ ಮಕ್ಕಳು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?
ವಿಮೋಚನಕಾಂಡ 37:25
ಅವನು ಜಾಲೀ ಮರದಿಂದ ಧೂಪಪೀಠವನ್ನು ಮಾಡಿದನು; ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲವಾಗಿ ಚಚ್ಚೌಕವಾಗಿತ್ತು; ಅದು ಎರಡು ಮೊಳ ಎತ್ತರವಾಗಿತ್ತು. ಅದರ ಕೊಂಬುಗಳು ಸಹ ಜಾಲೀ ಮರದಿಂದಲೇ ಮಾಡಲ್ಪಟ್ಟಿದ್ದವು.
ಅರಣ್ಯಕಾಂಡ 16:40
ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
1 ಪೂರ್ವಕಾಲವೃತ್ತಾ 6:49
ಆದರೆ ಆರೋನನು ಅವನ ಕುಮಾ ರರು ದಹನಬಲಿಯ ಪೀಠದ ಮೇಲೆಯೂ ಧೂಪ ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಾನದ ಸಮಸ್ತ ಕಾರ್ಯಕ್ಕೂ ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೂ ನೇಮಿಸಲ್ಪಟ್ಟರು.
2 ಪೂರ್ವಕಾಲವೃತ್ತಾ 26:16
ಆದರೆ ಅವನು ಬಲ ಹೊಂದಿದ ಮೇಲೆ ಅವನ ಹೃದಯವು ನಾಶನಕ್ಕೆ ಎತ್ತಲ್ಪಟ್ಟಿತು. ಏನಂದರೆ, ಅವನು ಧೂಪಪೀಠದ ಮೇಲೆ ಧೂಪ ಸುಡುವದಕ್ಕೆ ಕರ್ತನ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಕರ್ತ ನಿಗೆ ವಿರೋಧವಾಗಿ ಅಪರಾಧ ಮಾಡಿದನು.
ಇಬ್ರಿಯರಿಗೆ 9:6
ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು.