ಯೋಹಾನನು 2:16
ಆತನು ಪಾರಿವಾಳ ಮಾರುವ ವರಿಗೆ--ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯ ನ್ನಾಗಿ ಮಾಡಬೇಡಿರಿ ಅಂದನು.
And | καὶ | kai | kay |
said | τοῖς | tois | toos |
sold that them unto | τὰς | tas | tahs |
περιστερὰς | peristeras | pay-ree-stay-RAHS | |
doves, | πωλοῦσιν | pōlousin | poh-LOO-seen |
Take | εἶπεν | eipen | EE-pane |
these things | Ἄρατε | arate | AH-ra-tay |
hence; | ταῦτα | tauta | TAF-ta |
make | ἐντεῦθεν | enteuthen | ane-TAYF-thane |
not | μὴ | mē | may |
my | ποιεῖτε | poieite | poo-EE-tay |
τὸν | ton | tone | |
Father's | οἶκον | oikon | OO-kone |
τοῦ | tou | too | |
house | πατρός | patros | pa-TROSE |
an house | μου | mou | moo |
of merchandise. | οἶκον | oikon | OO-kone |
ἐμπορίου | emporiou | ame-poh-REE-oo |
Cross Reference
ಮತ್ತಾಯನು 21:13
ಆತನು ಅವರಿಗೆ--ನನ್ನ ಮನೆಯು ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದಾಗಿ ಬರೆದದೆ; ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
ಲೂಕನು 2:49
ಆತನು ಅವರಿಗೆ--ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಕೆಲಸದಲ್ಲಿ ಇರಬೇಕಾದದ್ದು ಅಗತ್ಯವಾಗಿತ್ತೆಂದು ನಿಮಗೆ ತಿಳಿಯಲಿಲ್ಲವೋ ಅಂದನು.
ಯೆರೆಮಿಯ 7:11
ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಕರ್ತನು ಅನ್ನುತ್ತಾನೆ.
ಯೆಶಾಯ 56:5
ನನ್ನ ಆಲಯದ ಲ್ಲಿಯೂ ಗೋಡೆಗಳ ಬಳಿಗೂ ಕುಮಾರ ಕುಮಾರ್ತೆ ಯರಿಗಿಂತ ಉತ್ತಮವಾದ ಸ್ಥಳವನ್ನೂ ಹೆಸರನ್ನೂ ನಾನು ಕೊಡುತ್ತೇನೆ. ಎಂದಿಗೂ ಅಳಿಯದ ಶಾಶ್ವತ ವಾದ ಹೆಸರನ್ನು ಅವರಿಗೆ ನಾನು ಕೊಡುವೆನು ಎಂದು ಹೇಳುತ್ತಾನೆ.
ಮಾರ್ಕನು 11:17
ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
ಯೋಹಾನನು 5:17
ಆದರೆ ಯೇಸು ಅವರಿಗೆ--ನನ್ನ ತಂದೆಯು ಈ ವರೆಗೂ ಕೆಲಸ ಮಾಡುತ್ತಾನೆ ಮತ್ತು ನಾನೂ ಕೆಲಸ ಮಾಡುತ್ತೇನೆ ಅಂದನು.
2 ಪೇತ್ರನು 2:14
ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲ ಚಿತ್ತರನ್ನು ಮರುಳು ಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ.
ಯೋಹಾನನು 20:17
ಯೇಸು ಆಕೆಗೆ--ನನ್ನನ್ನು ಮುಟ್ಟಬೇಡ; ಯಾಕಂದರೆ ನಾನು ಇನ್ನೂ ನನ್ನ ತಂದೆಯ ಬಳಿಗೆ ಏರಿಹೋಗಲಿಲ್ಲ; ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವ ರಿಗೆ--ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ಹೇಳು
ಅಪೊಸ್ತಲರ ಕೃತ್ಯಗ 19:24
ಹೇಗಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಡಯಾನಿಗೆ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸಬಿನವರಿಗೆ ಬಹಳ ಲಾಭವನ್ನುಂಟುಮಾಡುತ್ತಿದ್ದನು.
ಯೋಹಾನನು 10:29
ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು.
2 ಪೇತ್ರನು 2:3
ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
ಹೋಶೇ 12:7
ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ.
1 ತಿಮೊಥೆಯನಿಗೆ 6:5
ಇದ್ದಲ್ಲದೆ ಬುದ್ದಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ವ್ಯರ್ಥ ವಾದ ವಿವಾದಗಳು ಉಂಟಾಗುತ್ತವೆ. ಇಂಥವರಿಂದ ದೂರವಾಗಿರ್ರಿ.
ಯೋಹಾನನು 8:49
ಅದಕ್ಕೆ ಯೇಸು ಪ್ರತ್ಯುತ್ತರವಾಗಿ-- ನನಗೆ ದೆವ್ವ ಹಿಡಿದಿಲ್ಲ; ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ, ನೀವು ನನ್ನನ್ನು ಅವಮಾನ ಪಡಿಸುತ್ತೀರಿ.