Jeremiah 47:5
ಗಾಜಾದ ಮೇಲೆ ಬೋಳುತನ ಬಂತು; ಅಷ್ಕೆ ಲೋನು ಅವರ ತಗ್ಗಿನ ಉಳಿದವುಗಳಿಂದ ತೆಗೆದು ಹಾಕಲ್ಪಟ್ಟಿತು; ಎಷ್ಟು ಕಾಲ ನಿನಗೆ ನೀನೇ ಗಾಯಮಾಡಿ ಕೊಳ್ಳುವಿ?
Jeremiah 47:5 in Other Translations
King James Version (KJV)
Baldness is come upon Gaza; Ashkelon is cut off with the remnant of their valley: how long wilt thou cut thyself?
American Standard Version (ASV)
Baldness is come upon Gaza; Ashkelon is brought to nought, the remnant of their valley: how long wilt thou cut thyself?
Bible in Basic English (BBE)
The hair is cut off from the head of Gaza; Ashkelon has come to nothing; the last of the Anakim are deeply wounding themselves.
Darby English Bible (DBY)
Baldness is come upon Gazah; Ashkelon is cut off, the remnant of their valley: how long wilt thou cut thyself?
World English Bible (WEB)
Baldness is come on Gaza; Ashkelon is brought to nothing, the remnant of their valley: how long will you cut yourself?
Young's Literal Translation (YLT)
Come hath baldness unto Gaza, Cut off hath been Ashkelon, O remnant of their valley, Till when dost thou cut thyself?
| Baldness | בָּ֤אָה | bāʾâ | BA-ah |
| is come | קָרְחָה֙ | qorḥāh | kore-HA |
| upon | אֶל | ʾel | el |
| Gaza; | עַזָּ֔ה | ʿazzâ | ah-ZA |
| Ashkelon | נִדְמְתָ֥ה | nidmĕtâ | need-meh-TA |
| is cut off | אַשְׁקְל֖וֹן | ʾašqĕlôn | ash-keh-LONE |
| remnant the with | שְׁאֵרִ֣ית | šĕʾērît | sheh-ay-REET |
| of their valley: | עִמְקָ֑ם | ʿimqām | eem-KAHM |
| long how | עַד | ʿad | ad |
| מָתַ֖י | mātay | ma-TAI | |
| wilt thou cut | תִּתְגּוֹדָֽדִי׃ | titgôdādî | teet-ɡoh-DA-dee |
Cross Reference
ಯೆರೆಮಿಯ 48:37
ಎಲ್ಲಾ ತಲೆಗಳು ಬೋಳಾಗುವವು; ಎಲ್ಲಾ ಗಡ್ಡಗಳು ಕ್ಷೌರವಾಗುವವು; ಎಲ್ಲಾ ಕೈಗಳ ಮೇಲೆ ಗಾಯಗಳೂ ಸೊಂಟಗಳ ಮೇಲೆ ಗೋಣಿತಟ್ಟು ಇರುವವು.
ಯೆರೆಮಿಯ 25:20
ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
ಮಿಕ 1:16
ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
ಯೆರೆಮಿಯ 41:5
ಶೆಕೆಮ್‌ನಿಂದಲೂ ಶಿಲೋವಿನಿಂದಲೂ ಸಮಾರ್ಯ ದಿಂದಲೂ ಎಂಭತ್ತು ಮಂದಿ ಮನುಷ್ಯರು ಗಡ್ಡವನ್ನು ಕ್ಷೌರಮಾಡಿದವರಾಗಿಯೂ ವಸ್ತ್ರಗಳನ್ನು ಹರಕೊಂಡವ ರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಕರ್ತನ ಆಲಯಕ್ಕೆ ತರುವದಕ್ಕೋಸ್ಕರ ಕಾಣಿಕೆಯನ್ನೂ ಧೂಪವನ್ನೂ ಕೈಯಲ್ಲಿ ತಕ್ಕೊಂಡು ಬಂದರು.
ಮಾರ್ಕನು 5:5
ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು.
ಜೆಕರ್ಯ 9:5
ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು.
ಚೆಫನ್ಯ 2:4
ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್ ಕೀಳಲ್ಪಡುವದು.
ಆಮೋಸ 1:6
ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು.
ಯೆಹೆಜ್ಕೇಲನು 25:16
ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;
ಯೆಹೆಜ್ಕೇಲನು 7:18
ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿ ಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡು ವದು; ಎಲ್ಲಾ ಮುಖಗಳ ಮೇಲೆ ನಾಚಿಕೆಯೂ ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವವು.
ಯೆರೆಮಿಯ 47:4
ಫಿಲಿಷ್ಟಿಯರೆಲ್ಲರನ್ನು ಸೂರೆ ಮಾಡುವದಕ್ಕೂ ತೂರಿನಿಂದ ಚೀದೋನಿನಿಂದ ಉಳಿದ ಪ್ರತಿ ಸಹಾಯಕನನ್ನು ಕಡಿದು ಬಿಡುವದಕ್ಕೂ ಆ ದಿವಸ ಬಂತು. ಕರ್ತನು ಫಿಲಿಷ್ಟಿಯರನ್ನು ಕಫ್ತೋರಿನ ದೇಶದ ಉಳಿದವರನ್ನೂ ಸೂರೆ ಮಾಡುವನು.
ಯೆರೆಮಿಯ 47:1
ಫರೋಹನು ಗಾಜಾವನ್ನು ಹೊಡೆಯುವದಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ವಿರೋಧವಾಗಿ ಪ್ರವಾದಿಯಾದ ಯೆರೆವಿಾಯನಿಗೆ ಬಂದ ಕರ್ತನ ವಾಕ್ಯವು.
ಯೆರೆಮಿಯ 16:1
ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
ಯೆಶಾಯ 15:2
ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
1 ಅರಸುಗಳು 18:28
ಅವರು ದೊಡ್ಡ ಶಬ್ದದಿಂದ ಕೂಗಿ ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಕತ್ತಿಗಳಿಂದಲೂ ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.
ನ್ಯಾಯಸ್ಥಾಪಕರು 1:18
ಇದಲ್ಲದೆ ಯೂದನು ಗಾಜಾವನ್ನೂ ಅದರ ಮೇರೆಯನ್ನೂ ಅಷ್ಕೆಲೋನನ್ನ್ನೂ ಅದರ ಮೇರೆಯನ್ನೂ ಎಕ್ರೋನನ್ನ್ನೂ ಅದರ ಮೇರೆ ಯನ್ನೂ ತೆಗೆದುಕೊಂಡನು.
ಧರ್ಮೋಪದೇಶಕಾಂಡ 14:1
ನೀವು ನಿಮ್ಮ ದೇವರಾದ ಕರ್ತನ ಮಕ್ಕಳೇ. ನೀವು ಸತ್ತವರಿಗೋಸ್ಕರ ಗಾಯಮಾಡಿ ಕೊಳ್ಳಬೇಡಿರಿ. ನಿಮ್ಮ ಕಣ್ಣುಗಳ ನಡುವೆ ಬೋಳಿಸಿ ಕೊಳ್ಳಬೇಡಿರಿ.
ಯಾಜಕಕಾಂಡ 21:5
ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳಬಾರದು. ಅಲ್ಲದೆ ತಮ್ಮ ಗಡ್ಡದ ಮೂಲೆಯನ್ನು ಬೋಳಿಸಿ ಕೊಳ್ಳಬಾರದು. ತಮ್ಮ ಶರೀರವನ್ನು ಕೊಯ್ದುಕೊಳ್ಳ ಬಾರದು.
ಯಾಜಕಕಾಂಡ 19:28
ಸತ್ತವರಿ ಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು, ನಿಮ್ಮ ಮೇಲೆ ಯಾವ ಚಿನ್ಹೆಗಳನ್ನೂ ಮುದ್ರಿಸಿಕೊಳ್ಳ ಬಾರದು; ನಾನೇ ಕರ್ತನು.