ಯೆರೆಮಿಯ 33:7 in Kannada

ಕನ್ನಡ ಕನ್ನಡ ಬೈಬಲ್ ಯೆರೆಮಿಯ ಯೆರೆಮಿಯ 33 ಯೆರೆಮಿಯ 33:7

Jeremiah 33:7
ಯೆಹೂದದ ಸೆರೆಯನ್ನೂ ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ ಅವರನ್ನು ಮುಂಚಿನ ಹಾಗೆ ಕಟ್ಟುವೆನು.

Jeremiah 33:6Jeremiah 33Jeremiah 33:8

Jeremiah 33:7 in Other Translations

King James Version (KJV)
And I will cause the captivity of Judah and the captivity of Israel to return, and will build them, as at the first.

American Standard Version (ASV)
And I will cause the captivity of Judah and the captivity of Israel to return, and will build them, as at the first.

Bible in Basic English (BBE)
And I will let the fate of Judah and of Israel be changed, building them up as at first.

Darby English Bible (DBY)
And I will turn the captivity of Judah and the captivity of Israel, and will build them, as at the beginning.

World English Bible (WEB)
I will cause the captivity of Judah and the captivity of Israel to return, and will build them, as at the first.

Young's Literal Translation (YLT)
And I have turned back the captivity of Judah, And the captivity of Israel, And I have built them as at the first,

And
I
will
cause

וַהֲשִֽׁבֹתִי֙wahăšibōtiyva-huh-shee-voh-TEE
captivity
the
אֶתʾetet
of
Judah
שְׁב֣וּתšĕbûtsheh-VOOT
and
the
captivity
יְהוּדָ֔הyĕhûdâyeh-hoo-DA
Israel
of
וְאֵ֖תwĕʾētveh-ATE
to
return,
שְׁב֣וּתšĕbûtsheh-VOOT
build
will
and
יִשְׂרָאֵ֑לyiśrāʾēlyees-ra-ALE
them,
as
at
the
first.
וּבְנִתִ֖יםûbĕnitîmoo-veh-nee-TEEM
כְּבָרִֽאשֹׁנָֽה׃kĕbāriʾšōnâkeh-va-REE-shoh-NA

Cross Reference

ಯೆರೆಮಿಯ 30:3
ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ನನ್ನ ಜನರಾದ ಇಸ್ರಾಯೇಲ್‌ ಮತ್ತು ಯೆಹೂದದ ಸೆರೆಯವರನ್ನು ತಿರುಗಿ ಬರ ಮಾಡುತ್ತೇನೆ; ಆಗ ನಾನು ಅವರ ತಂದೆಗಳಿಗೆ ಕೊಟ್ಟ ದೇಶಕ್ಕೆ ಅವರನ್ನು ತಿರುಗಿ ಬರಮಾಡುತ್ತೇನೆ; ಅವರು ಅದನ್ನು ಸ್ವಾಧೀನ ಮಾಡಿಕೊಳ್ಳುವರು.

ಆಮೋಸ 9:14
ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.

ಯೆಶಾಯ 1:26
ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ.

ಯೆರೆಮಿಯ 32:44
ಬೆನ್ಯಾವಿಾನನ ದೇಶದ ಲ್ಲಿಯೂ ಯೆರೂಸಲೇಮಿನ ಪ್ರದೇಶಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಬೆಟ್ಟದ ಪಟ್ಟಣಗಳ ಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ ದಕ್ಷಿಣದ ಪಟ್ಟಣಗಳ ಲ್ಲಿಯೂ ಹೊಲಗಳನ್ನು ಹಣಕ್ಕೆ ಕೊಂಡುಕೊಂಡು ಪತ್ರಗಳನ್ನು ಬರೆದು ಮುದ್ರೆ ಹಾಕಿ ಸಾಕ್ಷಿಗಳನ್ನು ಇಟ್ಟುಕೊಳ್ಳುವರು; ನಾನು ಅವರ ಸೆರೆಯಿಂದ ಹಿಂದಿರು ಗುವಂತೆ ಮಾಡುವೆನು ಎಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 31:4
ಇಸ್ರಾ ಯೇಲಿನ ಕನ್ಯಾಸ್ತ್ರೀಯೇ, ನೀನು ಕಟ್ಟಲ್ಪಟ್ಟಿರುವ ಹಾಗೆ ತಿರುಗಿ ನಿನ್ನನ್ನು ಕಟ್ಟುವೆನು; ನಿನ್ನ ದಮ್ಮಡಿಗಳಿಂದ ತಿರುಗಿ ನಿನ್ನನ್ನು ಅಲಂಕರಿಸಿಕೊಂಡು ಸಂತೋಷಪಡು ವವರ ನಾಟ್ಯದಲ್ಲಿ ಹೊರಡುವಿ.

ಯೆರೆಮಿಯ 30:18
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.

ಯೆರೆಮಿಯ 30:20
ಅವರ ಮಕ್ಕಳು ಸಹ ಪೂರ್ವ ಕಾಲದ ಹಾಗೆ ಇರುವರು; ಅವರ ಸಭೆಯು ನನ್ನ ಮುಂದೆ ಸ್ಥಾಪಿಸಲ್ಪಡುವದು; ಅವರನ್ನು ಬಾಧಿಸುವವರೆಲ್ಲರನ್ನು ವಿಚಾರಿಸುವೆನು.

ಯೆರೆಮಿಯ 31:28
ನಾನು ಕೀಳುವದಕ್ಕೂ ಮುರಿಯುವದಕ್ಕೂ ಕೆಡವುದಕ್ಕೂ ನಾಶಮಾಡು ವದಕ್ಕೂ ಕುಗ್ಗಿಸುವದಕ್ಕೂ ಅವರ ವಿಷಯ ಹೇಗೆ ಎಚ್ಚರವಾಗಿದ್ದೆನೋ ಹಾಗೆಯೇ ಕಟ್ಟುವದಕ್ಕೂ ನೆಡು ವದಕ್ಕೂ ಅವರನ್ನು ಕಾಯುವೆ ನೆಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 33:26
ಆಗ ಯಾಕೋಬನ ಸಂತಾನವನ್ನೂ ನನ್ನ ಸೇವಕನಾದ ದಾವೀದನನ್ನೂ ಬೇಡವೆಂದು ಬಿಟ್ಟು ಅವನ ಸಂತಾನದಿಂದ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತಾನದ ಮೇಲೆ ಆಳುವವರನ್ನು ತಕ್ಕೊಳ್ಳದೆ ಇದ್ದೆನು; ಆದರೆ ನಾನು ಅವರ ಸೆರೆಯಿಂದ ಬಿಡಿಸಿ ಅವರನ್ನು ಕರುಣಿಸುವೆನು.

ಯೆರೆಮಿಯ 42:10
ನೀವು ಇನ್ನು ಈ ದೇಶದಲ್ಲಿ ವಾಸ ಮಾಡಿದರೆ ನಾನು ನಿಮ್ಮನ್ನು ಕೆಡವದೆ ಕಟ್ಟುವೆನು; ಕಿತ್ತುಹಾಕದೆ ನೆಡುವೆನು. ನಾನು ನಿಮಗೆ ಮಾಡಿರುವ ಕೇಡಿನ ವಿಷಯ ಪಶ್ಚಾತ್ತಾಪ ಪಡುತ್ತೇನೆ.

ಯೆರೆಮಿಯ 29:14
ನಿಮಗೆ ಕಂಡುಕೊಳ್ಳಲ್ಪಡುವೆನೆಂದು ಕರ್ತನು ಅನ್ನುತ್ತಾನೆ; ನಿಮ್ಮ ಸೆರೆಯನ್ನು ತಿರುಗಿಸಿ ನಾನು ನಿಮ್ಮನ್ನು ಓಡಿಸಿ ಬಿಟ್ಟ ಎಲ್ಲಾ ಜನಾಂಗಗಳಿಂದಲೂ ಎಲ್ಲಾ ಸ್ಥಳಗಳಿಂದಲೂ ನಿಮ್ಮನ್ನು ಕೂಡಿಸುವೆನೆಂದು ಕರ್ತನು ಅನ್ನುತ್ತಾನೆ; ನಾನು ಯಾವ ಸ್ಥಳದಿಂದ ನಿಮ್ಮನ್ನು ಸೆರೆಯಾಗಿ ಕಳುಹಿಸಿ ದೆನೋ ಆ ಸ್ಥಳಕ್ಕೆ ನಿಮ್ಮನ್ನು ತಿರುಗಿ ಬರಮಾಡುವೆನು.

ಯೆರೆಮಿಯ 24:6
ನಾನು ನನ್ನ ಕಣ್ಣುಗಳನ್ನು ಅವರ ಮೇಲೆ ಒಳ್ಳೇದಕ್ಕಾಗಿ ಇಡುವೆನು. ಈ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು; ಕೆಡವಿ ಹಾಕದೆ ಅವರನ್ನು ಕಟ್ಟುವೆನು, ಕೀಳದೆ ಅವರನ್ನು ನೆಡುವೆನು.

ಯೆರೆಮಿಯ 23:3
ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು.

ಕೀರ್ತನೆಗಳು 126:4
ಓ ಕರ್ತನೇ, ದಕ್ಷಿಣದಲ್ಲಿರುವ ಹೊಳೆಗಳ ಹಾಗೆ ಸೆರೆಯಿಂದ ನಮ್ಮನ್ನು ತಿರಿಗಿ ಬರಮಾಡು.

ಕೀರ್ತನೆಗಳು 85:1
ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.

ಕೀರ್ತನೆಗಳು 14:7
ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬರಲಿ; ಕರ್ತನು ತನ್ನ ಜನರನ್ನು ಸೆರೆಯಿಂದ ತಿರಿಗಿ ಬರಮಾಡುವಾಗ ಯಾಕೋಬನು ಉಲ್ಲಾಸಿ ಸುವನು, ಇಸ್ರಾಯೇಲನು ಸಂತೋಷಿಸುವನು.

ಯೆರೆಮಿಯ 33:11
ಇನ್ನು ಮೇಲೆ ಆನಂದದ ಸ್ವರವೂ ಸಂತೋಷದ ಸ್ವರವೂ ಮದಲಿಂಗನ ಸ್ವರವೂ ಮದಲ ಗಿತ್ತಿಯ ಸ್ವರವೂ--ಸೈನ್ಯಗಳ ಕರ್ತನನ್ನು ಕೊಂಡಾಡಿರಿ; ಕರ್ತನು ಒಳ್ಳೆಯವನೇ, ಆತನ ಕೃಪೆ ನಿರಂತರವೇ ಎಂದು ಹೇಳಿ, ಸ್ತೋತ್ರದ ಬಲಿಯನ್ನು ಕರ್ತನ ಆಲ ಯಕ್ಕೆ ತರುವವರ ಸ್ವರವೂ ಕೇಳಲ್ಪಡುವದು; ನಾನು ಮುಂಚಿನ ಹಾಗೆ ದೇಶದ ಸೆರೆಯನ್ನು ತಿರುಗಿಸುತ್ತೇ ನೆಂದು ಕರ್ತನು ಹೇಳುತ್ತಾನೆ.

ಹೋಶೇ 2:15
ಅವಳ ದ್ರಾಕ್ಷೇ ತೋಟಗಳನ್ನು ಅಲ್ಲಿರುವಾ ಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು; ಅಲ್ಲಿ ಅವಳು ಯೌವನದ ದಿನಗಳಲ್ಲಿಯೂ ಐಗುಪ್ತ ದೇಶದೊಳಗಿಂದ ಹೊರಟುಬಂದ ದಿನದಲ್ಲಿಯೂ ಆದ ಹಾಗೆ ಹಾಡುವಳು.

ಮಿಕ 7:14
ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆ ಯನ್ನೂ ನಿನ್ನ ಕೋಲಿನಿಂದ ಮೇಯಿಸು; ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.

ಚೆಫನ್ಯ 3:20
ಆ ಕಾಲದಲ್ಲಿ ಅಂದರೆ ನಾನು ನಿಮ್ಮನ್ನು ಕೂಡಿಸುವ ಕಾಲದಲ್ಲಿ ನಿಮ್ಮನ್ನು ಕರಕೊಂಡು ಬರುವೆನು; ನಾನು ನಿಮ್ಮ ಸೆರೆಯನ್ನು ನಿಮ್ಮ ಕಣ್ಣುಗಳ ಮುಂದೆ ತಿರುಗಿಸುವಾಗ ಭೂಮಿಯ ಎಲ್ಲಾ ಜನರಲ್ಲಿ ನಿಮಗೆ ಕೀರ್ತಿಯನ್ನೂ ಹೊಗಳಿಕೆ ಯನ್ನೂ ಉಂಟುಮಾಡುವೆನು ಎಂದು ಕರ್ತನು ಹೇಳುತ್ತಾನೆ.

ಜೆಕರ್ಯ 1:17
ಇನ್ನೂ ಕೂಗಿ ಹೇಳು, ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವವು; ಕರ್ತನು ಚೀಯೋನನ್ನು ಇನ್ನು ಆದರಿಸುವನು; ಯೆರೂಸಲೇಮನ್ನು ಇನ್ನು ಆದುಕೊಳ್ಳುವನು.

ಯೆಶಾಯ 11:12
ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು.

ಕೀರ್ತನೆಗಳು 126:1
ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು.