Hosea 14:7
ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು.
Hosea 14:7 in Other Translations
King James Version (KJV)
They that dwell under his shadow shall return; they shall revive as the corn, and grow as the vine: the scent thereof shall be as the wine of Lebanon.
American Standard Version (ASV)
They that dwell under his shadow shall return; they shall revive `as' the grain, and blossom as the vine: the scent thereof shall be as the wine of Lebanon.
Bible in Basic English (BBE)
His branches will be stretched out, he will be beautiful as the olive-tree and sweet-smelling as Lebanon.
Darby English Bible (DBY)
They shall return and sit under his shadow; they shall revive [as] corn, and blossom as the vine: the renown thereof shall be as the wine of Lebanon.
World English Bible (WEB)
Men will dwell in his shade. They will revive like the grain, And blossom like the vine. Their fragrance will be like the wine of Lebanon.
Young's Literal Translation (YLT)
Return do the dwellers under his shadow, They revive `as' corn, and flourish as a vine, His memorial `is' as wine of Lebanon.
| They that dwell | יָשֻׁ֙בוּ֙ | yāšubû | ya-SHOO-VOO |
| under his shadow | יֹשְׁבֵ֣י | yōšĕbê | yoh-sheh-VAY |
| return; shall | בְצִלּ֔וֹ | bĕṣillô | veh-TSEE-loh |
| they shall revive | יְחַיּ֥וּ | yĕḥayyû | yeh-HA-yoo |
| as the corn, | דָגָ֖ן | dāgān | da-ɡAHN |
| grow and | וְיִפְרְח֣וּ | wĕyiprĕḥû | veh-yeef-reh-HOO |
| as the vine: | כַגָּ֑פֶן | kaggāpen | ha-ɡA-fen |
| the scent | זִכְר֖וֹ | zikrô | zeek-ROH |
| wine the as be shall thereof | כְּיֵ֥ין | kĕyên | keh-YANE |
| of Lebanon. | לְבָנֽוֹן׃ | lĕbānôn | leh-va-NONE |
Cross Reference
ಕೀರ್ತನೆಗಳು 91:1
ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
1 ಕೊರಿಂಥದವರಿಗೆ 15:36
ಮೂಢನು ನೀನು; ನೀನು ಬಿತ್ತಿರುವದು ಸಾಯದ ಹೊರತು ಜೀವಿತವಾಗು ವದಿಲ್ಲ.
ಯೋಹಾನನು 12:24
ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು.
ಯೋಹಾನನು 11:25
ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
ಜೆಕರ್ಯ 8:12
ಬೀಜವುವೃದ್ಧಿಯಾಗುವದು; ದ್ರಾಕ್ಷೇ ಬಳ್ಳಿ ತನ್ನ ಫಲವನ್ನು ಕೊಡುವದು; ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವದು; ಆಕಾಶ ಗಳು ತಮ್ಮ ಮಂಜನ್ನು ಕೊಡುವವು; ಈ ಜನರಲ್ಲಿ ಉಳಿದವರು ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳು ವಂತೆ ಮಾಡುವೆನು.
ಹೋಶೇ 14:5
ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು.
ಹೋಶೇ 6:2
ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
ಹೋಶೇ 2:22
ಭೂಮಿಯು ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಕೇಳುವವು. ಅವು ಇಜ್ರೇಲನ್ನು ಕೇಳುವವು.
ಯೆಹೆಜ್ಕೇಲನು 17:23
ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು; ಅದರ ಕೊಂಬೆಗಳು ಒಡೆದು ಫಲಫಲಿಸುವದು; ಘನವುಳ್ಳ ದೇವದಾರು ಆಗುವದು; ಪ್ರತಿಯೊಂದು ಪುಕ್ಕಗಳುಳ್ಳ ಪಕ್ಷಿಗಳು ಅದರ ಕೊಂಬೆಗಳ ನೆರಳಿನ ಕೆಳಗೆ ವಾಸ ಮಾಡುವವು; ಅದರಡಿಯಲ್ಲಿ ವಾಸಿಸುವವು.
ಯೆಶಾಯ 61:11
ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವದೋ ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳಿಸುವದೋ ಹಾಗೆಯೇ ದೇವರಾದ ಕರ್ತನ ನೀತಿಯನ್ನೂ ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವನು.
ಯೆಶಾಯ 32:1
ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯ ದಿಂದ ದೊರೆತನಮಾಡುವರು.
ಪರಮ ಗೀತ 6:11
ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.
ಪರಮ ಗೀತ 2:3
ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು.
ಕೀರ್ತನೆಗಳು 138:7
ನಾನು ಕಷ್ಟದ ಮಧ್ಯದಲ್ಲಿ ನಡೆದಾಗ್ಯೂ ನೀನು ನನ್ನನ್ನು ಬದುಕಿಸಿ ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈಯನ್ನು ಚಾಚುತ್ತೀ; ನಿನ್ನ ಬಲಗೈ ನನ್ನನ್ನು ರಕ್ಷಿಸುತ್ತದೆ.
ಕೀರ್ತನೆಗಳು 85:6
ನಿನ್ನ ಜನರು ನಿನ್ನಲ್ಲಿ ಸಂತೋಷ ಪಡುವ ಹಾಗೆ ನೀನು ತಿರುಗಿ ನಮ್ಮನ್ನು ಉಜ್ಜೀವಿ ಸುವದಿಲ್ಲವೋ?