ವಿಮೋಚನಕಾಂಡ 21:1 in Kannada

ಕನ್ನಡ ಕನ್ನಡ ಬೈಬಲ್ ವಿಮೋಚನಕಾಂಡ ವಿಮೋಚನಕಾಂಡ 21 ವಿಮೋಚನಕಾಂಡ 21:1

Exodus 21:1
1 ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.

Exodus 21Exodus 21:2

Exodus 21:1 in Other Translations

King James Version (KJV)
Now these are the judgments which thou shalt set before them.

American Standard Version (ASV)
Now these are the ordinances which thou shalt set before them.

Bible in Basic English (BBE)
Now these are the laws which you are to put before them.

Darby English Bible (DBY)
And these are the judgments which thou shalt set before them.

Webster's Bible (WBT)
Now these are the judgments which thou shalt set before them.

World English Bible (WEB)
"Now these are the ordinances which you shall set before them.

Young's Literal Translation (YLT)
`And these `are' the judgments which thou dost set before them:

Now
these
וְאֵ֙לֶּה֙wĕʾēllehveh-A-LEH
are
the
judgments
הַמִּשְׁפָּטִ֔יםhammišpāṭîmha-meesh-pa-TEEM
which
אֲשֶׁ֥רʾăšeruh-SHER
thou
shalt
set
תָּשִׂ֖יםtāśîmta-SEEM
before
לִפְנֵיהֶֽם׃lipnêhemleef-nay-HEM

Cross Reference

ಧರ್ಮೋಪದೇಶಕಾಂಡ 4:14
ನೀವು ದಾಟಿಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಮಾಡತಕ್ಕ ನಿಯಮ ನ್ಯಾಯಗಳನ್ನು ನಿಮಗೆ ಬೋಧಿಸಬೇಕೆಂದು ಆಗಲೇ ಕರ್ತನು ನನಗೆ ಆಜ್ಞಾಪಿಸಿದನು.

ಧರ್ಮೋಪದೇಶಕಾಂಡ 6:20
ಮುಂದಿನ ಕಾಲದಲ್ಲಿ ನಿನ್ನ ಮಗನು--ನಮ್ಮ ದೇವರಾದ ಕರ್ತನು ಆಜ್ಞಾಪಿಸಿದ ಸಾಕ್ಷಿ ನಿಯಮ ನ್ಯಾಯಗಳು ಏನೆಂದು ನಿನ್ನನ್ನು ಕೇಳಿದರೆ ನಿನ್ನ ಮಗ ನಿಗೆ--

ವಿಮೋಚನಕಾಂಡ 24:3
ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.

2 ಪೂರ್ವಕಾಲವೃತ್ತಾ 19:10
ಇದಲ್ಲದೆ ರಕ್ತ ರಕ್ತಕ್ಕೂ ನ್ಯಾಯಕ್ಕೂ ಆಜ್ಞೆಗೂ ನಿಯಮಗಳಿಗೂ ನ್ಯಾಯ ತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ ರೌದ್ರವು ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಕರ್ತನಿಗೆ ವಿರೋಧವಾಗಿ ಅಪರಾಧಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ, ಆಗ ನೀವು ಅಪರಾಧವಿಲ್ಲದವರಾಗಿರುವಿರಿ.

ನೆಹೆಮಿಯ 9:13
ಸೀನಾಯ್‌ ಪರ್ವ ತದ ಮೇಲಕ್ಕೆ ಇಳಿದು ಬಂದಿ; ಆಕಾಶದಿಂದ ಅವರ ಸಂಗಡ ಮಾತನಾಡಿದಿ; ಸರಿಯಾದ ನ್ಯಾಯಗಳನ್ನೂ ಸತ್ಯವಾದ ನ್ಯಾಯಪ್ರಮಾಣಗಳನ್ನೂ ಉತ್ತಮವಾದ ಕಟ್ಟಳೆ ಗಳನ್ನೂ ಆಜ್ಞೆಗಳನ್ನೂ ಅವರಿಗೆ ಕೊಟ್ಟಿ.

ನೆಹೆಮಿಯ 10:29
ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;

ಕೀರ್ತನೆಗಳು 147:19
ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.

ಯೆಹೆಜ್ಕೇಲನು 20:11
ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.

ಯೆಹೆಜ್ಕೇಲನು 20:25
ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.

ಮಲಾಕಿಯ 4:4
ನನ್ನ ಸೇವಕನಾದ ಮೋಶೆಯ ನ್ಯಾಯಪ್ರಮಾಣ ವನ್ನೂ ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ನಿಯಮ ಗಳನ್ನೂ ನ್ಯಾಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.

ಮತ್ತಾಯನು 28:20
ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್‌.

1 ಥೆಸಲೊನೀಕದವರಿಗೆ 4:1
ಸಹೋದರರೇ, ನೀವು ಹೇಗೆ ನಡೆದು ಕೊಂಡು ದೇವರನ್ನು ಮೆಚ್ಚಿಸಬೇಕೆಂದು ನಮ್ಮಿಂದ ಕೇಳಿರುವ ಪ್ರಕಾರವೇ ನೀವು ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗಬೇಕೆಂದು ನಾವು ಕರ್ತನಾದ ಯೇಸು ವಿನ ಮೂಲಕ ನಿಮ್ಮನ್ನು ಬೇಡಿಕೊಂಡು ಎಚ್ಚರಿಸುತ್ತೇವೆ.

1 ಅರಸುಗಳು 6:12
ನೀನು ಕಟ್ಟಿಸುವ ಈ ಮನೆಯನ್ನು ಕುರಿತು ಏನಂದರೆ--ನೀನು ನನ್ನ ಕಟ್ಟಳೆ ಗಳಲ್ಲಿ ನಡೆದು ನನ್ನ ನ್ಯಾಯಗಳ ಪ್ರಕಾರಮಾಡಿ ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಕೊಂಡರೆ ನಾನು ನಿನ್ನ ತಂದೆಯಾದ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರ ಮಾಡಿ,

ಧರ್ಮೋಪದೇಶಕಾಂಡ 6:1
ನೀವು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಮಾಡತಕ್ಕವುಗಳು;

ಯಾಜಕಕಾಂಡ 18:5
ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.

ಯಾಜಕಕಾಂಡ 18:26
ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.

ಯಾಜಕಕಾಂಡ 19:37
ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.

ಯಾಜಕಕಾಂಡ 20:22
ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ.

ಅರಣ್ಯಕಾಂಡ 35:24
ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ ರಕ್ತ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು.

ಅರಣ್ಯಕಾಂಡ 36:13
ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಿದ ಆಜ್ಞೆಗಳೂ ನ್ಯಾಯಗಳೂ ಇವೇ.

ಧರ್ಮೋಪದೇಶಕಾಂಡ 4:5
ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.

ಧರ್ಮೋಪದೇಶಕಾಂಡ 4:8
ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?

ಧರ್ಮೋಪದೇಶಕಾಂಡ 4:45
ಇಸ್ರಾಯೇಲ್‌ ಮಕ್ಕಳು ಐಗುಪ್ತದೊಳಗಿಂದ ಹೊರಟ ಮೇಲೆ

ಧರ್ಮೋಪದೇಶಕಾಂಡ 5:1
ಆಗ ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವರಿಗೆ--ಓ ಇಸ್ರಾಯೇಲೇ, ನಾನು ಈಹೊತ್ತು ನಿಮಗೆ ಹೇಳುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿರಿ; ಅವುಗಳನ್ನು ಕಲಿತು ಕೈಕೊಂಡು ನಡೆಯಬೇಕು.

ಧರ್ಮೋಪದೇಶಕಾಂಡ 5:31
ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.

ವಿಮೋಚನಕಾಂಡ 19:7
ಆಗ ಮೋಶೆಯು ಬಂದು ಜನರ ಹಿರಿಯರನ್ನು ಕರೆದು ಕರ್ತನು ತನಗೆ ಆಜ್ಞಾಪಿಸಿದ ಈ ಮಾತುಗ ಳನ್ನೆಲ್ಲಾ ಅವರ ಮುಂದೆ ಇಟ್ಟನು.