Lamentations 3:39
ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?
Lamentations 3:39 in Other Translations
King James Version (KJV)
Wherefore doth a living man complain, a man for the punishment of his sins?
American Standard Version (ASV)
Wherefore doth a living man complain, a man for the punishment of his sins?
Bible in Basic English (BBE)
What protest may a living man make, even a man about the punishment of his sin?
Darby English Bible (DBY)
Wherefore doth a living man complain, a man for the punishment of his sins?
World English Bible (WEB)
Why does a living man complain, a man for the punishment of his sins?
Young's Literal Translation (YLT)
What -- sigh habitually doth a living man, A man for his sin?
| Wherefore | מַה | ma | ma |
| doth a living | יִּתְאוֹנֵן֙ | yitʾônēn | yeet-oh-NANE |
| man | אָדָ֣ם | ʾādām | ah-DAHM |
| complain, | חָ֔י | ḥāy | hai |
| man a | גֶּ֖בֶר | geber | ɡEH-ver |
| for | עַל | ʿal | al |
| the punishment of his sins? | חֲטָאָֽו׃ | ḥăṭāʾāw | huh-ta-AV |
Cross Reference
ಮಿಕ 7:9
ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
ಙ್ಞಾನೋಕ್ತಿಗಳು 19:3
ಮನುಷ್ಯನ ಬುದ್ಧಿಹೀನತೆ ತನ್ನ ದಾರಿಯನ್ನು ತಪ್ಪಿಸುತ್ತದೆ; ಅವನ ಹೃದಯವು ಕರ್ತನಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.
ಯೆಶಾಯ 38:17
ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
ಯೆಶಾಯ 51:20
ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ.
ಯೆರೆಮಿಯ 30:15
ನಿನ್ನ ಗಾಯದ ನೋವಿನ ನಿಮಿತ್ತ ಯಾಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗ ದಂಥದ್ದೇ; ನಿನ್ನ ಅಕ್ರಮಗಳು ಬಹಳವಾಗಿರುವದ ರಿಂದಲೂ ನಿನ್ನ ಪಾಪಗಳು ಪ್ರಬಲವಾಗಿರುವದ ರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
ಪ್ರಲಾಪಗಳು 3:22
ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.
ಯೋನ 2:3
ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು.
ಯೋನ 4:8
ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
ಇಬ್ರಿಯರಿಗೆ 12:5
ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ--ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಇಲ್ಲವೆ ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳ ಬೇಡ;
ಪ್ರಕಟನೆ 16:9
ಮನುಷ್ಯರು ಬಲವಾದ ಕಾವಿನಿಂದ ಕಂದಿಹೋದರೂ ಅವರು ದೇವರನ್ನು ಘನಪಡಿಸುವ ಹಾಗೆ ಮಾನಸಾಂತರ ಮಾಡಿಕೊಳ್ಳದೆ ಈ ಉಪದ್ರವ ಗಳ ಮೇಲೆ ಅಧಿಕಾರವುಳ್ಳ ದೇವರ ನಾಮವನ್ನು ದೂಷಿಸಿದರು.
ಯೋಬನು 11:6
ಸುಜ್ಞಾನವು ಇಮ್ಮಡಿಯಾಗಿದೆ. ಹಾಗಾದರೆ ದೇವರು ನಿನ್ನ ಅಕ್ರಮ ಕ್ಕಿಂತ ಕಡಿಮೆಯಾದದ್ದನ್ನು ನಿನಗೆ ಮನ್ನಿಸಿ ಬಿಡುತ್ತಾ ನೆಂದು ತಿಳಿದುಕೋ.
ಎಜ್ರನು 9:13
ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ
2 ಅರಸುಗಳು 6:32
ಎಲೀಷನು ಹಿರಿಯರ ಜೊತೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು; ಆಗ ಅರಸನು ತನ್ನ ಬಳಿಯಿಂದ ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಸೇವಕನು ಎಲೀಷನ ಬಳಿಗೆ ಬರುವದಕ್ಕಿಂತ ಮುಂಚೆ ಅವನು ಹಿರಿಯರಿಗೆ--ಈ ಕೊಲೆಪಾತಕನ ಮಗನು ನನ್ನ ತಲೆ ಯನ್ನು ತೆಗೆಯುವದಕ್ಕೆ ಕಳುಹಿಸಿದ್ದನ್ನು ನೋಡಿದಿರೋ? ನೋಡಿರಿ; ಆ ಸೇವಕನು ಬಂದ ಕೂಡಲೆ ಬಾಗಲು ಮುಚ್ಚಿ ಬಾಗಲ ಬಳಿಯಲ್ಲಿ ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿರಿ. ಅವನ ಯಜಮಾನನ ಪಾದಗಳ ಶಬ್ದವು ಅವನ ಹಿಂದೆ ಇಲ್ಲವೋ ಅಂದನು.
ಆದಿಕಾಂಡ 4:13
ಆಗ ಕಾಯಿನನು ಕರ್ತನಿಗೆ--ನನ್ನ ಶಿಕ್ಷೆಯು ನಾನು ತಾಳಲಾರದಷ್ಟು ದೊಡ್ಡದಾಗಿದೆ.
ಯಾಜಕಕಾಂಡ 26:41
ನಾನೂ ಅವರಿಗೆ ವಿರೋಧವಾಗಿ ನಡೆದುಕೊಂಡು ತಮ್ಮ ಶತ್ರುಗಳ ದೇಶಕ್ಕೆ ಬರಮಾಡಿದ್ದನ್ನು ಅರಿಕೆಮಾಡಿ ಪರಿಛೇದನೆ ಇಲ್ಲದ ಅವರ ಹೃದಯವು ತಗ್ಗಿಸಲ್ಪಟ್ಟು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಅವರು ಒಪ್ಪಿಕೊಳ್ಳುವದಾದರೆ
ಯಾಜಕಕಾಂಡ 26:43
ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ.
ಅರಣ್ಯಕಾಂಡ 11:11
ಆದದರಿಂದ ಮೋಶೆಯು ಕರ್ತನಿಗೆ ಹೇಳಿದ್ದೇ ನಂದರೆ--ಈ ಸಮಸ್ತ ಜನರ ಭಾರವನ್ನು ನನ್ನ ಮೇಲೆ ಹಾಕುವದಕ್ಕೆ ನೀನು ನಿನ್ನ ಸೇವಕನಿಗೆ ಯಾಕೆ ಉಪದ್ರ ಮಾಡಿದ್ದೀ? ನಿನ್ನ ದೃಷ್ಟಿಯಲ್ಲಿ ನನಗೆ ಯಾಕೆ ದಯೆ ದೊರಕಲಿಲ್ಲ?
ಅರಣ್ಯಕಾಂಡ 16:41
ಆದರೆ ಮರುದಿನದಲ್ಲಿ ಇಸ್ರಾಯೇಲ್ ಮಕ್ಕಳ ಸಭೆಯಲ್ಲಾ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಕರ್ತನ ಜನರನ್ನು ಕೊಂದು ಹಾಕಿದ್ದೀರಿ ಅಂದರು.
ಅರಣ್ಯಕಾಂಡ 17:12
ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ.
ಯೆಹೋಶುವ 7:6
ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡು ತಾನೂ ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಾಯಂಕಾಲದ ವರೆಗೆ ಕರ್ತನ ಮಂಜೂಷದ ಮುಂದೆ ನೆಲದಮೇಲೆ ಬೋರಲು ಬಿದ್ದರು.
2 ಸಮುವೇಲನು 6:7
ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು.
2 ಅರಸುಗಳು 3:13
ಎಲೀ ಷನು ಇಸ್ರಾಯೇಲಿನ ಅರಸನಿಗೆ -- ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆ ತಾಯಿಯ ಪ್ರವಾದಿಗಳ ಬಳಿಗೆ ಹೋಗು ಅಂದನು. ಇಸ್ರಾಯೇ ಲಿನ ಅರಸನು ಅವನಿಗೆ--ಇಲ್ಲ, ಕರ್ತನು ಈ ಮೂರು ಮಂದಿ ಅರಸರುಗಳನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕೆ ಒಟ್ಟಾಗಿ ಕರೆದಿದ್ದಾನಲ್ಲಾ ಅಂದನು.
ಆದಿಕಾಂಡ 4:5
ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು.