Jude 1:23
ಬೇರೆಯವರನ್ನು ಬೆಂಕಿಯಿಂದ ಎಳಕೊಂಡು ಭಯದಿಂದ ರಕ್ಷಿಸಿರಿ. ಶರೀರದಿಂದ ಮೈಲಿಗೆಯಾದ ಅಂಗಿಯನ್ನು ಹಗೆಮಾಡಿರಿ.
Jude 1:23 in Other Translations
King James Version (KJV)
And others save with fear, pulling them out of the fire; hating even the garment spotted by the flesh.
American Standard Version (ASV)
and some save, snatching them out of the fire; and on some have mercy with fear; hating even the garment spotted by the flesh.
Bible in Basic English (BBE)
And to some give salvation, pulling them out of the fire; and on some have mercy with fear, hating even the clothing which is made unclean by the flesh.
Darby English Bible (DBY)
but others save with fear, snatching [them] out of the fire; hating even the garment spotted by the flesh.
World English Bible (WEB)
and some save, snatching them out of the fire with fear, hating even the clothing stained by the flesh.
Young's Literal Translation (YLT)
and some in fear save ye, out of the fire snatching, hating even the coat from the flesh spotted.
| And | οὓς | hous | oos |
| others | δὲ | de | thay |
| save | ἐν | en | ane |
| with | φόβῳ | phobō | FOH-voh |
| fear, | σῴζετε, | sōzete | SOH-zay-tay |
| pulling | ἐκ | ek | ake |
| them out of | τοῦ | tou | too |
| the | πυρὸς | pyros | pyoo-ROSE |
| fire; | ἁρπάζοντες | harpazontes | ahr-PA-zone-tase |
| hating | μισοῦντες | misountes | mee-SOON-tase |
| even | καὶ | kai | kay |
| the | τὸν | ton | tone |
| garment | ἀπὸ | apo | ah-POH |
| spotted | τῆς | tēs | tase |
| by | σαρκὸς | sarkos | sahr-KOSE |
| the | ἐσπιλωμένον | espilōmenon | ay-spee-loh-MAY-none |
| flesh. | χιτῶνα | chitōna | hee-TOH-na |
Cross Reference
Revelation 3:4
ತಮ್ಮ ವಸ್ತ್ರಗಳನ್ನು ಮಲಿನಮಾಡಿ ಕೊಳ್ಳದಿರುವ ಕೆಲವರು ಸಾರ್ದಿಸಿನಲ್ಲಿ ಸಹ ನಿನ್ನಲ್ಲಿ ದ್ದಾರೆ. ಅವರು ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ನನ್ನೊಂದಿಗೆ ನಡೆಯುವರು. ಯಾಕಂದರೆ ಅವರು ಯೋಗ್ಯರಾಗಿದ್ದಾರೆ.
Amos 4:11
ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
1 Timothy 4:16
ನಿನ್ನ ವಿಷಯದಲ್ಲಿಯೂ ಉಪ ದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿ ನಿರತನಾಗಿರು; ಹೀಗೆ ಮಾಡುವದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.
1 Corinthians 3:15
ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು. ಆದರೂ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಹಾಗಿರುವನು.
2 Corinthians 7:10
ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.
1 Corinthians 5:3
ನಾನಂತೂ ದೇಹದಿಂ ದೂರವಾಗಿದ್ದರೂ ಆತ್ಮದಿಂದ ಹತ್ತಿರದಲ್ಲಿದ್ದು ಇಂಥ ಕಾರ್ಯಮಾಡಿದವನನ್ನು ಕುರಿತು ನಿಜವಾಗಿ ಆಗಲೇ ಹತ್ತಿರವಿದ್ದವನಂತೆ ತೀರ್ಪುಮಾಡಿದ್ದೇನೆ.
Leviticus 13:47
ಕುಷ್ಠವ್ಯಾಧಿಯು ಅವನ ಉಡುಪಿನಲ್ಲಿದ್ದರೆ ಅದು ಉಣ್ಣೆಯ ಉಡುಪಾಗಲಿ ನಾರಿನ ಉಡುಪಾಗಲಿ
Revelation 3:18
ನೀನು ಐಶ್ವರ್ಯವಂತ ನಾಗುವ ಹಾಗೆ ಬೆಂಕಿಯಲ್ಲಿ ಶೋಧಿಸಿದ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಹೊದ್ದು ಕೊಳ್ಳುವದಕ್ಕಾಗಿ ಬಿಳೀ ವಸ್ತ್ರವನ್ನೂ ಕಣ್ಣು ಕಾಣುವಂತೆ ನಿನ್ನ ಕಣ್ಣುಗಳಿಗೆ ಹಚ್ಚುವದಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳಬೇಕೆಂದು ನಿನಗೆ ಬುದ್ಧಿ ಹೇಳುತ್ತೇ
2 Thessalonians 3:14
ಈ ಪತ್ರಿಕೆಯ ಮೂಲಕ ವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ವಿಧೇಯನಾಗದಿದ್ದರೆ ಅವನನ್ನು ಗುರುತು ಇಟ್ಟು ಕೊಂಡು ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.
1 Corinthians 15:33
ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.
1 Corinthians 5:9
ಜಾರರ ಸಹವಾಸವನ್ನು ಮಾಡಬಾರದೆಂದು ಒಂದು ಪತ್ರಿಕೆಯಲ್ಲಿ ನಿಮಗೆ ಬರೆದಿದ್ದೆನು.
Romans 11:14
ಹೀಗೆ ಯಾವ ವಿಧದಲ್ಲಿಯಾದರೂ ನನ್ನ ಸ್ವಜನರಲ್ಲಿ ಹುರುಡನ್ನು ಹುಟ್ಟಿಸಿ ಅವರಲ್ಲಿ ಕೆಲವರು ರಕ್ಷಣೆ ಹೊಂದುವಂತೆ ಮಾಡೇನು.
Zechariah 3:2
ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
Lamentations 4:14
ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು, ಅವರು ರಕ್ತದಿಂದ ತಮ್ಮನ್ನು ತಾವೇ ಅಪವಿತ್ರಪಡಿಸಿ ಕೊಂಡರು; ಆದದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೆ ಹೋದರು.
Isaiah 64:6
ನಾವೆಲ್ಲರೂ ಅಶುದ್ದವಾದದ್ದರ ಹಾಗೆ ಇದ್ದೇವೆ; ನಮ್ಮ ನೀತಿ ಕಾರ್ಯಗಳು ಮೈಲಿಗೆ ವಸ್ತ್ರದ ಹಾಗಿವೆ; ನಾವೆಲ್ಲರೂ ಎಲೆಯ ಹಾಗೆ ಬಾಡುತ್ತೇವೆ; ನಮ್ಮ ಅಕ್ರಮಗಳು ಗಾಳಿಯಂತೆ ನಮ್ಮನ್ನು ಎತ್ತಿಕೊಂಡು ಹೋಗಿವೆ.
Leviticus 15:17
ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮ ನೀರಿನಿಂದ ತೊಳೆಯಲ್ಪಟ್ಟು ಸಾಯಂಕಾಲದ ವರೆಗೆ ಅಶುದ್ಧವಾಗಿರಬೇಕು.
Leviticus 14:47
ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.