Exodus 33:4 in Kannada

Kannada Kannada Bible Exodus Exodus 33 Exodus 33:4

Exodus 33:4
ಜನರು ಈ ಕಠಿಣವಾದ ಮಾತುಗಳನ್ನು ಕೇಳಿ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಹಾಕಿ ಕೊಳ್ಳಲಿಲ್ಲ.

Exodus 33:3Exodus 33Exodus 33:5

Exodus 33:4 in Other Translations

King James Version (KJV)
And when the people heard these evil tidings, they mourned: and no man did put on him his ornaments.

American Standard Version (ASV)
And when the people heard these evil tidings, they mourned: and no man did put on him his ornaments.

Bible in Basic English (BBE)
Hearing this bad news the people were full of grief, and no one put on his ornaments.

Darby English Bible (DBY)
And when the people heard this evil word, they mourned; and no man put on his ornaments.

Webster's Bible (WBT)
And when the people heard these evil tidings, they mourned: and no man put on him his ornaments.

World English Bible (WEB)
When the people heard this evil news, they mourned: and no one put on his jewelry.

Young's Literal Translation (YLT)
And the people hear this sad thing, and mourn; and none put his ornaments on him.

And
when
the
people
וַיִּשְׁמַ֣עwayyišmaʿva-yeesh-MA
heard
הָעָ֗םhāʿāmha-AM

אֶתʾetet
these
הַדָּבָ֥רhaddābārha-da-VAHR
evil
הָרָ֛עhārāʿha-RA
tidings,
הַזֶּ֖הhazzeha-ZEH
mourned:
they
וַיִּתְאַבָּ֑לוּwayyitʾabbālûva-yeet-ah-BA-loo
and
no
וְלֹאwĕlōʾveh-LOH
man
שָׁ֛תוּšātûSHA-too
put
did
אִ֥ישׁʾîšeesh
on
עֶדְי֖וֹʿedyôed-YOH
him
his
ornaments.
עָלָֽיו׃ʿālāywah-LAIV

Cross Reference

Numbers 14:39
ಮೋಶೆಯು ಇಸ್ರಾಯೇಲ್‌ ಮಕ್ಕಳೆಲ್ಲರಿಗೆ ಈ ಮಾತುಗಳನ್ನು ಹೇಳಿದಾಗ ಜನರು ಬಹಳವಾಗಿ ದುಃಖಪಟ್ಟರು.

Ezekiel 26:16
ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು.

Ezekiel 24:23
ನಿಮ್ಮ ರುಮಾಲುಗಳು ತಲೆಯ ಮೇಲೆಯೂ ನಿಮ್ಮ ಜೋಡು ಗಳು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವವು; ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರುಳುವಿರಿ.

Ezekiel 24:17
ವ್ಯಸನದಿಂದ ಸತ್ತವರಿಗಾಗಿ ಅರಚಬೇಡ, ಗೋಳಾಡ ಬೇಡ ನೀನು ರುಮಾಲನ್ನು ಕಟ್ಟಿಕೊಂಡು ಕಾಲುಗಳಿಗೆ ಜೋಡುಗಳನ್ನು ಮೆಟ್ಟಿಕೋ; ತುಟಿಗಳನ್ನು ಮುಚ್ಚಿಕೊಳ್ಳ ಬೇಡ; ಮನುಷ್ಯರ ರೊಟ್ಟಿಯನ್ನು ತಿನ್ನಬೇಡ.

Numbers 14:1
1 ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ಆ ರಾತ್ರಿಯೆಲ್ಲಾ ಅತ್ತರು.

Zechariah 7:5
ದೇಶದ ಜನರೆಲ್ಲರಿಗೂ ಯಾಜಕ ರಿಗೂ ಹೀಗೆ ಹೇಳು--ನೀವು ಈ ಎಪ್ಪತ್ತು ವರುಷಗಳು ಐದನೇ ಮತ್ತು ಏಳನೇ ತಿಂಗಳುಗಳಲ್ಲಿ ಉಪವಾಸ ಮಾಡಿ ದುಃಖಿಸಿದಾಗ ನನಗೆ ಏನಾದರೂ ಉಪವಾಸ ಮಾಡಿದ್ದೀರೋ?

Zechariah 7:3
ಸೈನ್ಯಗಳ ಕರ್ತನ ಮನೆಯಲ್ಲಿದ್ದ ಯಾಜಕರ ಸಂಗಡಲೂ ಪ್ರವಾದಿಗಳ ಸಂಗಡಲೂ ನಾನು ಮಾತನಾಡಿ--ಇಷ್ಟು ವರುಷ ಮಾಡಿದ ಪ್ರಕಾರ ಐದನೇ ತಿಂಗಳಲ್ಲಿ ನನ್ನನ್ನು ಪ್ರತ್ಯೇಕಿಸಿಕೊಂಡು ಅಳಲೋ ಎಂದು ಹೇಳುವದಕ್ಕೂ ಅವರು ಸರೆಚರ ನನ್ನೂ ರೆಗೆಮ್‌ ಮೆಲೆಕನನ್ನೂ ಅವರ ಮನುಷ್ಯ ರನ್ನೂ ದೇವರ ಆಲಯಕ್ಕೆ ಕಳುಹಿಸಿದಾಗಲೇ ಅಂದನು.

Jonah 3:6
ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು.

Hosea 7:14
ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ.

Isaiah 32:11
ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.

Job 2:12
ಅವರು ದೂರದಿಂದ ತಮ್ಮ ಕಣ್ಣುಗಳನ್ನು ಎತ್ತಿದಾಗ ಅವನ ಗುರುತು ತಿಳಿಯದೆ ತಮ್ಮ ಸ್ವರವನ್ನೆತ್ತಿ ಅತ್ತು, ತಮ್ಮ ತಮ್ಮ ನಿಲುವಂಗಿಗಳನ್ನು ಹರಿದು, ತಮ್ಮ ತಲೆಯ ಮೇಲೆ ಧೂಳನ್ನೂ ಆಕಾಶದ ಕಡೆಗೆ ತೂರಿದರು.

Job 1:20
ಆಗ ಯೋಬನು ಎದ್ದು ತನ್ನ ನಿಲುವಂಗಿಯನ್ನು ಹರಿದು ತನ್ನ ತಲೆಬೋಳಿಸಿಕೊಂಡು ನೆಲಕ್ಕೆ ಬಿದ್ದು ಆರಾಧಿಸಿ

Esther 4:1
1 ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು, ಗೋಣಿಯ ತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು.

Ezra 9:3
ನಾನು ಈ ಕಾರ್ಯವನ್ನು ಕೇಳಿದಾಗ ನನ್ನ ವಸ್ತ್ರವನ್ನೂ ನನ್ನ ನಿಲುವಂಗಿಯನ್ನೂ ಹರಿದು ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕಿತ್ತು ಭ್ರಮೆಗೊಂಡು ಕುಳಿತಿದ್ದೆನು.

2 Kings 19:1
ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು ಕರ್ತನ ಮನೆಯಲ್ಲಿ ಪ್ರವೇಶಿಸಿದನು.

1 Kings 21:27
ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ ಏನಾಯಿತಂದರೆ, ಅವನು ತನ್ನ ವಸ್ತ್ರಗಳನ್ನು ಹರಿದು ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು ಉಪವಾಸಮಾಡಿ ಗೋಣಿಯಲ್ಲಿ ಮಲಗಿಕೊಂಡು ಮೆಲ್ಲಗೆ ನಡೆದನು.

2 Samuel 19:24
ಸೌಲನ ಮಗನಾದ ಮೆಫೀಬೋಶೆತನು ಅರಸ ನನ್ನು ಎದುರುಗೊಳ್ಳಲು ಬಂದನು. ಅರಸನು ಹೋದಂದಿನಿಂದ ಅವನು ಮರಳಿ ಸಮಾಧಾನವಾಗಿ ಬರುವ ವರೆಗೂ ಅವನು ತನ್ನ ಪಾದಗಳನ್ನು ಕಟ್ಟಿ ಕೊಳ್ಳಲಿಲ್ಲ, ತನ್ನ ಗಡ್ಡವನ್ನು ಕತ್ತರಿಸಿಕೊಳ್ಳಲಿಲ್ಲ; ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲಿಲ್ಲ.

Leviticus 10:6
ಮೋಶೆಯು ಆರೋನನಿಗೂ ಅವನ ಕುಮಾರ ರಾದ ಎಲ್ಲಾಜಾರ್‌ನಿಗೂ ಈತಾಮಾರ್‌ನಿಗೂ ಹೇಳಿದ್ದೇ ನಂದರೆ--ನೀವು ಸಾಯದಂತೆಯೂ ಕೋಪವು ಜನ ರೆಲ್ಲರ ಮೇಲೆ ಬಾರದಂತೆಯೂ ನಿಮ್ಮ ತಲೆಗಳನ್ನು ಮುಚ್ಚಿಕೊಳ್ಳಿರಿ, ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದು ಕೊಳ್ಳಬೇಡಿರಿ; ಆದರೆ ಕರ್ತನು ಉರಿಸಿದ ನಿಮ್ಮ ಉರಿಯ ನಿಮಿತ್ತ ಸಹೋದರರಾಗಿರುವ ಇಸ್ರಾಯೇಲಿನ ಮನೆ ತನದವರೆಲ್ಲರೂ ಗೋಳಾಡಲಿ.