Exodus 29:38
ಇದಲ್ಲದೆ ಯಜ್ಞವೇದಿಯ ಮೇಲೆ ನೀನು ಅರ್ಪಿಸ ಬೇಕಾದದ್ದು ಇದೇ; ಒಂದು ವರುಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಡದೆ ಅರ್ಪಿಸಬೇಕು.
Exodus 29:38 in Other Translations
King James Version (KJV)
Now this is that which thou shalt offer upon the altar; two lambs of the first year day by day continually.
American Standard Version (ASV)
Now this is that which thou shalt offer upon the altar: two lambs a year old day by day continually.
Bible in Basic English (BBE)
Now this is the offering which you are to make on the altar: two lambs in their first year, every day regularly.
Darby English Bible (DBY)
And this is what thou shalt offer upon the altar -- two lambs of the first year, day by day continually.
Webster's Bible (WBT)
Now this is that which thou shalt offer upon the altar; two lambs of the first year, day by day continually.
World English Bible (WEB)
"Now this is that which you shall offer on the altar: two lambs a year old day by day continually.
Young's Literal Translation (YLT)
`And this `is' that which thou dost prepare on the altar; two lambs, sons of a year, daily continually;
| Now this | וְזֶ֕ה | wĕze | veh-ZEH |
| is that which | אֲשֶׁ֥ר | ʾăšer | uh-SHER |
| offer shalt thou | תַּֽעֲשֶׂ֖ה | taʿăśe | ta-uh-SEH |
| upon | עַל | ʿal | al |
| altar; the | הַמִּזְבֵּ֑חַ | hammizbēaḥ | ha-meez-BAY-ak |
| two | כְּבָשִׂ֧ים | kĕbāśîm | keh-va-SEEM |
| lambs | בְּנֵֽי | bĕnê | beh-NAY |
| first the of | שָׁנָ֛ה | šānâ | sha-NA |
| year | שְׁנַ֥יִם | šĕnayim | sheh-NA-yeem |
| day by day | לַיּ֖וֹם | layyôm | LA-yome |
| continually. | תָּמִֽיד׃ | tāmîd | ta-MEED |
Cross Reference
Daniel 12:11
ಪ್ರತಿದಿನದ ಯಜ್ಞವು ಸಕಾಲಕ್ಕೆ ತೆಗೆದುಹಾಕಲ್ಪಟ್ಟು ಹಾಳುಮಾಡುವಂಥ ಅಸಹ್ಯವು ಇರಿಸಲ್ಪಡುವ ವರೆಗೂ ಸಾವಿರದ ಇನ್ನೂರ ತೊಂಭತ್ತೊಂಭತ್ತು ದಿನಗಳು ಇರುವವು.
1 Chronicles 16:40
ಗಿಬ್ಯೋನಿನಲ್ಲಿರುವ ಉನ್ನತದಲ್ಲಿ ಕರ್ತನ ಗುಡಾರದ ಮುಂದೆ ಸೇವಿಸುವದಕ್ಕೆ ಯಾಜಕನಾದ ಚಾದೋಕನೂ ಯಾಜಕರಾದ ಅವನ ಸಹೋದರರೂ
Numbers 28:3
ನೀನು ಅವರಿಗೆ ಹೇಳಬೇಕಾದದ್ದು--ನೀವು ಕರ್ತನಿಗೆ ಅರ್ಪಿಸಬೇಕಾದ ಅರ್ಪಣೆ ಏನಂದರೆನಿತ್ಯ ದಹನಬಲಿಗಾಗಿ ಪ್ರತಿದಿನ ಮಚ್ಚೆಯಿಲ್ಲದ ಒಂದು ವರುಷದ ಎರಡು ಕುರಿಮರಿಗಳು.
Daniel 9:27
ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
Ezra 3:3
ಬಲಿಪೀಠವನ್ನು ಅದರ ಅಧಾರಗಳ ಮೇಲೆ ಇಟ್ಟರು; ಯಾಕಂದರೆ ಆ ದೇಶದ ಜನರಿ ಗೋಸ್ಕರ ಅವರಿಗೆ ಹೆದರಿಕೆ ಇತ್ತು. ಅವರು ಅದರ ಮೇಲೆ ದಹನಬಲಿಗಳನ್ನು ಉದಯದಲ್ಲಿಯೂ ಸಾಯ ಂಕಾಲದಲ್ಲಿಯೂ ಅರ್ಪಿಸಿದರು.
2 Chronicles 31:3
ಅವನು ಕರ್ತನ ನ್ಯಾಯಪ್ರಮಾಣದಲ್ಲಿ ಬರೆದ ಪ್ರಕಾರ ಉದಯಕಾಲದ ಸಾಯಂಕಾಲದ ದಹನ ಬಲಿಗಳಿಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಿಸಿದ ಹಬ್ಬಗಳಲ್ಲಿಯೂ ಬೇಕಾದ ದಹನಬಲಿಗಳಿಗೋಸ್ಕರವೂ ಅರಸನ ಸ್ಥಿತಿಯಿಂದ ಅವನ ಭಾಗವನ್ನು ನೇಮಿಸಿದನು.
2 Chronicles 13:11
ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
2 Chronicles 2:4
ಇಗೋ, ನನ್ನ ದೇವರಾದ ಕರ್ತನಿಗೆ ಅದನ್ನು ಪ್ರತಿಷ್ಠೆ ಮಾಡುವದಕ್ಕೂ ಆತನ ಮುಂದೆ ಪರಿಮಳ ಧೂಪವನ್ನು ಸುಡುವದಕ್ಕೂ ನಿತ್ಯ ಸಮ್ಮುಖದ ರೊಟ್ಟಿ ಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆಗಳ ಲ್ಲಿಯೂ ಇಸ್ರಾಯೇಲಿಗೆ ನಿರಂತರವಾಗಿರಲು ನೇಮಿ ಸಿದ ನಮ್ಮ ದೇವರಾದ ಕರ್ತನ ಹಬ್ಬಗಳಲ್ಲಿಯೂ ಉದಯಕಾಲದ ಸಾಯಂಕಾಲದ ದಹನಬಲಿಗಳಿಗೋ ಸ್ಕರವೂ ಆತನ ನಾಮಕ್ಕೆ ಆಲಯವನ್ನು ಕಟ್ಟಿಸುತ್ತೇನೆ.
Revelation 5:9
ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;
1 Peter 1:19
ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
Hebrews 7:27
ಮೊದಲು ತನ್ನ ಸ್ವಂತ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪ ಪರಿಹಾರಕ್ಕಾಗಿ ಯಜ್ಞಾರ್ಪಣೆ ಮಾಡುವ ಮಹಾ ಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸ ಬೇಕಾದ ಅವಶ್ಯವಿಲ್ಲ. ಯಾಕಂದರೆ ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.
John 1:29
ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
Daniel 9:21
ಹೌದು, ನಾನು ಪ್ರಾರ್ಥನೆಯಲ್ಲಿ ಮಾತನಾಡುತ್ತಿ ರುವಾಗ ನಾನು ಮೊದಲಿನ ದರ್ಶನದಲ್ಲಿ ಕಂಡ ಗಬ್ರಿಯೇಲನೆಂಬ ಮನುಷ್ಯನು ಬೇಗನೆ ಹಾರಿಬಂದು ಸುಮಾರು ಸಾಯಂಕಾಲದ ಕಾಣಿಕೆಯನ್ನು ಅರ್ಪಿಸುವ ಹೊತ್ತಿನಲ್ಲಿ ನನ್ನನ್ನು ಮುಟ್ಟಿದನು.