1 Samuel 24:12
ಕರ್ತನು ನನ್ನ ನಿನ್ನ ಮಧ್ಯದಲ್ಲಿ ನ್ಯಾಯತೀರಿಸಲಿ, ಕರ್ತನು ತಾನೇ ನನಗೋಸ್ಕರ ನಿನ್ನ ವಿಷಯ ಮುಯ್ಯಿಗೆ ಮುಯ್ಯಿ ಮಾಡಲಿ; ಆದರೆ ನನ್ನ ಕೈ ನಿನ್ನ ಮೇಲೆ ಇರುವದಿಲ್ಲ.
The Lord | יִשְׁפֹּ֤ט | yišpōṭ | yeesh-POTE |
judge | יְהוָה֙ | yĕhwāh | yeh-VA |
between | בֵּינִ֣י | bênî | bay-NEE |
Lord the and thee, and me | וּבֵינֶ֔ךָ | ûbênekā | oo-vay-NEH-ha |
avenge | וּנְקָמַ֥נִי | ûnĕqāmanî | oo-neh-ka-MA-nee |
of me | יְהוָ֖ה | yĕhwâ | yeh-VA |
thee: but mine hand | מִמֶּ֑ךָּ | mimmekkā | mee-MEH-ka |
not shall | וְיָדִ֖י | wĕyādî | veh-ya-DEE |
be | לֹ֥א | lōʾ | loh |
upon thee. | תִֽהְיֶה | tihĕye | TEE-heh-yeh |
בָּֽךְ׃ | bāk | bahk |
Cross Reference
Judges 11:27
ಆದದರಿಂದ ನಾನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ. ನೀನೇ ನನ್ನ ಮೇಲೆ ಯುದ್ಧಮಾಡುವದರಿಂದ ನನಗೆ ಕೆಟ್ಟದ್ದನ್ನು ಮಾಡುತ್ತೀ. ನ್ಯಾಯಾಧಿಪತಿಯಾದ ಕರ್ತನು ಈಹೊತ್ತು ಇಸ್ರಾ ಯೇಲ್ ಮಕ್ಕಳಿಗೂ ಅಮ್ಮೋನನ ಮಕ್ಕಳಿಗೂ ಮಧ್ಯ ದಲ್ಲಿ ನ್ಯಾಯತೀರಿಸಲಿ.
Genesis 16:5
ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.
Psalm 43:1
ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.
1 Peter 2:23
ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.
Romans 12:19
ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
Psalm 94:1
ಓ ಕರ್ತನೇ, ದೇವರೇ ಮುಯ್ಯಿ ತೀರಿಸುವದು ನಿನ್ನದು; ಓ ದೇವರೇ, ಮುಯ್ಯಿ ತೀರಿಸುವದು ನಿನಗೆ ಸೇರಿದ್ದು. ನಿನ್ನನ್ನು ಪ್ರಕಟಿಸಿಕೋ.
Psalm 35:1
ಓ ಕರ್ತನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ಸಂಗಡ ವ್ಯಾಜ್ಯವಾಡು; ನನಗೆ ವಿರೋಧವಾಗಿ ಯುದ್ಧಮಾಡುವವರ ಸಂಗಡ ಯುದ್ಧ ಮಾಡು.
Job 5:8
ನಾನು ದೇವರನ್ನು ಹುಡುಕುವೆನು; ನನ್ನ ಕಾರ್ಯವನ್ನು ದೇವರ ಮೇಲೆ ಹಾಕುವೆನು.
Psalm 7:8
ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು.
1 Samuel 26:23
ಆದರೆ ಕರ್ತನು ಪ್ರತಿಯೊ ಬ್ಬನಿಗೆ ಅವನ ನೀತಿಗೂ ಅವನ ನಂಬಿಗಸ್ತಿಕೆಗೂ ತಕ್ಕ ಫಲವನ್ನು ಕೊಡಲಿ. ಕರ್ತನು ಈ ಹೊತ್ತು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು. ಆದರೆ ನಾನು ಕರ್ತನ ಅಭಿಷಿಕ್ತನ ಮೇಲೆ ನನ್ನ ಕೈಚಾಚಲು ಮನಸ್ಸಿ ಲ್ಲದೆ ಇದ್ದೆನು.
Revelation 6:10
ಅವರು--ಓ ಕರ್ತನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂಮಿಯ ಮೇಲೆ ವಾಸಿಸುವವರು ನಮ್ಮ ರಕ್ತವನ್ನು ಸುರಿಸಿದ್ದಕ್ಕಾಗಿ ನೀನು ಎಷ್ಟು ಕಾಲದವರೆಗೆ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ ಎಂದು ಮಹಾಶಬ್ದದಿಂದ ಕೂಗುತ್ತಾ ಹೇಳಿದರು.
1 Samuel 26:10
ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
Genesis 31:53
ಅಬ್ರಹಾ ಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯ ತೀರಿಸಲಿ ಅಂದನು. ಆಗ ಯಾಕೋಬನು ತನ್ನ ತಂದೆಯಾದ ಇಸಾಕನು ಭಯದಿಂದ ಸೇವಿಸುವ ದೇವರ ಮೇಲೆ ಪ್ರಮಾಣಮಾಡಿದನು.